ವಾಹನ ಚಾಲನಾ ತರಬೇತಿ ನೀಡುತ್ತಿದ್ದಾಗಲೇ ದುರಂತವೊಂದು ಸಂಭವಿಸಿದ್ದು, ಈ ವೇಳೆ ಕಾರು ಬಾವಿಗೆ ಬಿದ್ದ ಪರಿಣಾಮ ತಂದೆ – ಮಗ ಮೃತಪಟ್ಟಿದ್ದಾರೆ. ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದೆ.
ಕಣ್ಣೂರಿನ ನೆಲ್ಲಿಕುನ್ನು ಎಂಬ ಗ್ರಾಮದಲ್ಲಿ 55 ವರ್ಷದ ಮ್ಯಾಥ್ಯೂ ಕುಟ್ಟಿ ತಮ್ಮ ಮಗ 18 ವರ್ಷದ ವೆನ್ಸ್ ಮ್ಯಾಥ್ಯೂಗೆ ಕಾರು ಚಾಲನಾ ತರಬೇತಿ ನೀಡುತ್ತಿದ್ದರು.
ಈ ವೇಳೆ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಬಾವಿಗೆ ಬಿದ್ದಿದೆ. ಘಟನೆಯಲ್ಲಿ ಮ್ಯಾಥ್ಯೂ ಕುಟ್ಟಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ವೆನ್ಸ್ ಮ್ಯಾಥ್ಯೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.