ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುವುದು ಮಾತ್ರವಲ್ಲ ಮನೆಯ ಪ್ರಮುಖ ಭಾಗವಾದ ಹಾಲ್ ನಲ್ಲಿ ವಾಸ್ತು ಪ್ರಕಾರ ವಸ್ತುಗಳನ್ನು ಜೋಡಿಸಿದರೆ ಮನೆಯ ವಾತಾವರಣ ಉತ್ತಮವಾಗಿರುತ್ತದೆ.
ಹಾಲ್ ನಲ್ಲಿ ಟಿ.ವಿ ಮತ್ತು ಟೆಲಿಪೋನ್ ಗಳನ್ನು ಆಗ್ನೀಯ ದಿಕ್ಕಿನಲ್ಲಿ ಇಡಿ. ಹಾಗೇ ಟೆಲಿಫೋನ್ ಬಳಿ ಎಂದಿಗೂ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಇಡಬೇಡಿ. ಇದರಿಂದ ಅದು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.
ಹಾಲ್ ನಲ್ಲಿ ಸೋಫಾವನ್ನು ನೈರುತ್ಯ ದಿಕ್ಕಿನ ಗೋಡೆಯ ಉದ್ದಕ್ಕೂ ಇಡಬೇಕು. ಹಾಗೇ ಟೇಬಲ್ ನ್ನು ಸೋಪಾದಿಂದ ಸ್ವಲ್ಪ ದೂರದಲ್ಲಿ ಹಾಲ್ ನ ಮಧ್ಯದಲ್ಲಿ ಇರಿಸಬೇಕು. ಅಲ್ಲದೇ ಹಾಲ್ ನಲ್ಲಿ ಇಡುವ ಟೇಬಲ್ ಆಕಾರ ತ್ರಿಕೋನವಾಗಿರಬಾರದು.