
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಇದು ಕೆಲವೊಮ್ಮೆ ನಿಜ ಅನ್ನಿಸುವುದುಂಟು. ಯಾಕೆಂದ್ರೆ ದೊಡ್ಡ ನೌಕರಿಯಲ್ಲಿದ್ದು, ಸುಂದರವಾಗಿದ್ದರೂ ಕೆಲವರಿಗೆ ಒಳ್ಳೆ ಸಂಗಾತಿ ಸಿಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಅದ್ರಲ್ಲಿ ಮಲಗುವ ಕೋಣೆ ಕೂಡ ಒಂದು. ಕೋಣೆ ಹಾಗೂ ನೀವು ಮಲಗುವ ರೀತಿಗೂ ಮದುವೆಗೂ ಸಂಬಂಧವಿದೆ. ಫೆಂಗ್ ಶೂಯಿ ಈ ಸಮಸ್ಯೆಗೆ ಪರಿಹಾರ ತಿಳಿಸಿದೆ.
ನಿಮ್ಮ ಕೊಠಡಿಯ ಬಗ್ಗೆ ಗಮನ ವಹಿಸಿ. ಆರ್ಟ್ ವರ್ಕ್ ಇರುವ, ಸುಂದರವಾದ ಹೂವಿನ ವಾಲ್ಪೇಪರ್ ಇಡಿ. ಈ ವಸ್ತುಗಳು ಪರೋಕ್ಷವಾಗಿ ನಿಮ್ಮೊಳಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕೋಣೆಯ ನೈರುತ್ಯ ಮೂಲೆಯಲ್ಲಿ ಹರಳುಗಳನ್ನಿಡಿ.
ನಿಮ್ಮ ಕೋಣೆಯಲ್ಲಿ ಒಂದೇ ಖುರ್ಚಿ ಇದೆ ಎಂದ್ರೆ ಅನುಮಾನವೇ ಬೇಡ. ಸುಲಭವಾಗಿ ನೀವು ಸಿಂಗಲ್ ಅಂತಾ ಹೇಳಿಬಿಡಬಹುದು. ಕೋಣೆಯಲ್ಲಿ ಮೂರ್ನಾಲ್ಕು ಮಂದಿ ಕುಳಿತುಕೊಳ್ಳುವಂತಹ ಸೋಫಾ ಇಡಿ. ನೈರುತ್ಯ ಗೋಡೆಗೆ ಕೆಂಪು ಬಣ್ಣ ಹಚ್ಚಿ.
ಗೋಡೆ ಹಾಗೂ ನಿಮ್ಮ ಹಾಸಿಗೆ ನಡುವೆ ಅಂತರವಿರಲಿ. ಅಂದ್ರೆ ಒಬ್ಬರು ಓಡಾಡುವಷ್ಟು ಅಂತರವಿರುವಂತೆ ನೋಡಿಕೊಳ್ಳಿ. ಹಾಗೆ ಮಲಗುವಾಗ ನಿಮ್ಮ ಕಾಲುಗಳು ಬಾಗಿಲ ಕಡೆ ಇರದಂತೆ ನೋಡಿಕೊಳ್ಳಿ.
ಕೋಣೆಯೊಳಗೆ ಟಿವಿಯನ್ನು ಇಡಬೇಡಿ. ಇದು ಮುಂದೆ ಸಂಬಂಧವನ್ನು ಹಾಳು ಮಾಡುತ್ತದೆ. ಹಾಗೆ ಹುಡುಗಿ ಅಥವಾ ಹುಡುಗ ಆಕರ್ಷಿತರಾಗಲು ನಿಮ್ಮ ಕೋಣೆಯನ್ನ ವರ್ಣರಂಜಿತವಾಗಿಡಿ. ಗುಲಾಬಿ ಬಣ್ಣವನ್ನು ಗೋಡೆಗೆ ಬಳಿಯಿರಿ.