ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕೆ ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಮನೆ ಸೌಂದರ್ಯ ಹೆಚ್ಚಿಸಲು ಅಥವಾ ಅವಶ್ಯಕತೆಯಿದೆ ಎಂದು ಮನೆಗೆ ನಾವು ತರುವ ಕೆಲ ವಸ್ತುಗಳು ನಮ್ಮ ಸಂತೋಷವನ್ನು ಹಾಳು ಮಾಡುತ್ತದೆ. ವಾಸ್ತುದೋಷಕ್ಕೆ ಅದು ಕಾರಣವಾಗುತ್ತದೆ. ಹಾಗಾಗಿ ಕೆಲವೊಂದು ವಸ್ತುಗಳನ್ನು ಅಪ್ಪಿತಪ್ಪಿಯೂ ಮನೆಗೆ ತರಬಾರದು ಮತ್ತು ಕೆಲವೊಂದು ತಪ್ಪುಗಳನ್ನು ಮಾಡಬಾರದು.
ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿರುವ ಹಾಲಿನ ಪಾತ್ರೆ ಸದಾ ಮುಚ್ಚಿರಬೇಕು. ಹಾಲಿನ ಪಾತ್ರೆಯನ್ನು ತೆರೆದಿಡಬಾಡರು. ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ಬೋನ್ಸಾಯಿ ಹಾಗೂ ಮುಳ್ಳಿನ ಗಿಡವನ್ನು ಮನೆಯೊಳಗೆ ಎಂದೂ ಇಡಬೇಡಿ.
ರಾಮಾಯಣ ಹಾಗೂ ಮಹಾಭಾರತ ಯುದ್ಧದ ಫೋಟೋಗಳನ್ನು ಮನೆಗೆ ತರಬೇಡಿ. ಹಾಗೆ ಉತ್ತರ ಪೂರ್ವ ದಿಕ್ಕಿನಲ್ಲಿ ಭಾರದ ಯಾವುದೇ ಮೂರ್ತಿಗಳನ್ನು ಇಡಬೇಡಿ. ಮಲಗುವ ಕೋಣೆಯ ಮಂಚದ ಕೆಳಗೆ ಚಪ್ಪಲಿ, ಶೂ ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.
ಹಾಸಿಗೆ ಹಿಂದೆ ಕಬ್ಬಿಣದ ಕಪಾಟು ಇರದಂತೆ ನೋಡಿಕೊಳ್ಳಿ. ಹಾಸಿಗೆ ಬಳಿಯೂ ಕಬ್ಬಿಣದ ವಸ್ತು ಇರಬಾರದು. ಮನೆಯ ಮಧ್ಯದಲ್ಲಿ ನೀರಿನ ಟ್ಯಾಂಕ್, ಹ್ಯಾಂಡ್ ಪಂಪ್ ಸೇರಿದಂತೆ ನೀರಿನ ಮೂಲ ಇರಬಾರದು.
ದಾನ ಅಥವಾ ದೇವರ ಪೂಜೆಗಾಗಿ ತಂದ ವಸ್ತುಗಳನ್ನು ಅನೇಕ ದಿನಗಳ ಕಾಲ ಮನೆಯಲ್ಲಿ ಇಡಬೇಡಿ. ದೇವರ ಹಾಳಾದ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು.