ವಾಸ್ತು ಶಾಸ್ತ್ರದಲ್ಲಿ ಸಣ್ಣ ಸಣ್ಣ ವಿಷ್ಯಗಳ ಬಗ್ಗೆಯೂ ಹೇಳಲಾಗಿದೆ. ಉಡುಗೊರೆ ಪಡೆಯೋದು, ಉಡುಗೊರೆ ನೀಡುವ ವಸ್ತುವಿನಿಂದ ಹಿಡಿದು ಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿ ಇಡಬೇಕು..? ಯಾವ ವಸ್ತು ಶುಭ…? ಯಾವ ವಸ್ತು ಅಶುಭ…? ಎಲ್ಲವನ್ನೂ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಎಂದೂ ಉಡುಗೊರೆ ರೂಪದಲ್ಲಿ ಪಡೆಯಬಾರದು. ತುಳಸಿ ಪವಿತ್ರ ಸಸ್ಯವೆಂದು ಎಲ್ಲರೂ ಸ್ವೀಕರಿಸುತ್ತಾರೆ. ಆದ್ರೆ ಇದು ನಕಾರಾತ್ಮಕ ಪ್ರಭಾವ ಬೀರುತ್ತದೆ.
ತಾಮ್ರ ಹಾಗೂ ಕಬ್ಬಿಣದ ಉಂಗುರವನ್ನು ಎಂದೂ ಒಟ್ಟಿಗೆ ಇಡಬಾರದು.
ಮನೆಯಿಂದ ಎಲ್ಲರೂ ಒಟ್ಟಿಗೆ ಹೊರಡಬಾರದು.
ಮನೆಗೆ ಖಾಲಿ ಕೈನಲ್ಲಿ ಎಂದೂ ಬರಬಾರದು.
ದೀಪವನ್ನು ಪ್ರತಿ ದಿನ ಎರಡು ಬತ್ತಿಯಲ್ಲೇ ಹಚ್ಚಬೇಕು.
ಪೂಜೆ ವೇಳೆ ಗಂಟೆ ಹಾಗೂ ಶಂಖ ಶಬ್ಧ ಮನೆಯಲ್ಲಿ ಕೇಳಬೇಕು.
ಪಕ್ಷಿಗಳಿಗಾಗಿ ಸದಾ ನೀರನ್ನಿಡಿ.
ಮನೆಯ ಎಲ್ಲ ಕನ್ನಡಿಗಳನ್ನು ಮುಚ್ಚಿಡಿ.
ಶೌಚಾಲಯದ ಬಾಗಿಲು ಮುಚ್ಚಿರಲಿ.
ಸ್ನಾನದ ನಂತ್ರವೇ ಅಡುಗೆ ಮನೆಗೆ ಹೋಗಿ.
ಬೆಳಿಗ್ಗೆ ಎದ್ದ ನಂತ್ರ ಮುಖ್ಯ ಬಾಗಿಲಿಗೆ ನೀರನ್ನು ಹಾಕಿ.
ಶುಕ್ರವಾರ ಖೀರನ್ನು ಅವಶ್ಯವಾಗಿ ಸೇವನೆ ಮಾಡಿ.