ಡ್ರೈ ಫ್ರೂಟ್ ಗಳಲ್ಲಿ ಒಂದಾದ ವಾಲ್ ನಟ್ ಸೇವನೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಮುಖ್ಯವಾಗಿ ದಿನನಿತ್ಯ ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು.
ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ ಹೊಂದಿರುವ ಇದನ್ನು ಊಟದ ಜೊತೆ ಸೇರಿಸಿಕೊಂಡು ತಿಂದರೆ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದೊತ್ತಡದ ಪ್ರಮಾಣ ನೇರವಾಗಿ ಹೃದ್ರೋಗದೊಂದಿಗೆ ಸಂಬಂಧ ಹೊಂದಿರುತ್ತದೆ. ಹಾಗಾಗಿ ವಾಲ್ ನಟ್ ಸೇವನೆ ಮಧ್ಯಮ ಪ್ರಮಾಣದ ರಕ್ತದೊತ್ತಡವನ್ನು ತಗ್ಗಿಸುತ್ತದೆ.
ಡಯಟ್ ಫುಡ್ ಆಗಿಯೂ ಬಳಕೆಯಾಗುವ ವಾಲ್ ನಟ್ ನಿಮ್ಮ ದೇಹದ ಅನಾವಶ್ಯಕ ಕೊಬ್ಬನ್ನು ಇಳಿಸುತ್ತದೆ. ದೇಹಕ್ಕೆ ಬೇಕಿರುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸಲು ಬಯಸುವವರು ನಿತ್ಯ ಇದನ್ನು ಸೇವಿಸುವುದು ಒಳ್ಳೆಯದು. ಎಲ್ಲಾ ದಿನಸಿ ಸಾಮಾಗ್ರಿ ಮಳಿಗೆಗಳಲ್ಲೂ ವಾಲ್ ನಟ್ ಲಭ್ಯವಾಗುತ್ತದೆ.