ವಾಲ್ನಟ್ ಅಪರ್ಯಾಪ್ತ ಕೊಬ್ಬು ರಕ್ತದ ಸಮತೋಲನ ಕಾಪಾಡುವ ಮೂಲಕ ರಕ್ತದೊತ್ತಡವನ್ನು ದೂರವಿರಿಸುತ್ತದೆ. ಪ್ರತಿದಿನ 60-80 ಗ್ರಾಂ ವಾಲ್ ನಟ್ ತಿನ್ನುವುದರಿಂದ ಆರೋಗ್ಯ ಸುಧಾರಿಸುತ್ತದೆ.
ವಾಲ್ ನಟ್ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಇರುವುದರಿಂದ ದೇಹಕ್ಕೆ ಅಗತ್ಯವಿರುವ ಪೌಷ್ಠಿಕಾಂಶ ದೊರೆಯುತ್ತದೆ. ದೇಹದ ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶವನ್ನು ಹೆಚ್ಚಿಸುತ್ತದೆ. ಇದು ಅನೇಕ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದವರು ನಡೆಸಿದ್ದ ಸಂಶೋಧನೆ ಪ್ರಕಾರ ಸ್ಯಾಚುರೇಟೆಡ್ ಕೊಬ್ಬುಗಿಂತ ವಾಲ್ನಟ್ ಸೇವಿಸುವ ಜನರ ಆರೋಗ್ಯ ಉತ್ತಮವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಅಕ್ರೋಟದ ಎಣ್ಣೆಯನ್ನು ಕೂದಲಿಗೆ ಹಾಗೂ ತ್ವಚೆಗೆ ಹಚ್ಚಿದಲ್ಲಿ ಉತ್ತಮ ಪರಿಣಾಮ ಕಾಣಿಸಲಿದೆ. ಇದನ್ನು ಅಡುಗೆಗೆ ಬಳಸಬಹುದಾಗಿದೆ. ನಿದ್ರಾಹೀನತೆ ಇದ್ದರೆ ವಾಲ್ನಟ್ ಬಳಸಬೇಕು.
ವಾಲ್ನಟ್ ಆಲ್ಫಾ ಲಿನೋಲೆನಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಒಮೆಗಾ -3 ಕೊಬ್ಬಿನ ಆಮ್ಲವಾಗಿದ್ದು ಕರುಳಿನ ಆರೋಗ್ಯಕ್ಕೆ ಉತ್ತಮ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.