alex Certify ವಾರದ ರಜೆಯನ್ನು ಹೇಗೆ ಕಳೆಯಬೇಕು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರದ ರಜೆಯನ್ನು ಹೇಗೆ ಕಳೆಯಬೇಕು…..?

ವಾರವೆಲ್ಲ ಉತ್ಸಾಹದಿಂದ ಇರಬೇಕಾದರೆ ವಾರದ ರಜಾದಿನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಆ ಸಮಯದಲ್ಲಿ ವಾರದ ಒತ್ತಡವನ್ನು ಕ್ರಮ ಕ್ರಮವಾಗಿ ದೂರ ಮಾಡಬಹುದು.

ಆದರೆ ವಾರದ ರಜೆಯನ್ನು ಯಾರು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ? ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದ್ದರಿಂದ ರಜಾ ದಿನವನ್ನು ಹೇಗೆ ಎಂಜಾಯ್ ಮಾಡಬೇಕೆಂಬುದನ್ನು ಯೋಜಿಸಿಕೊಳ್ಳಿ.

* ರಜೆಯೆಂದು ಇಡೀ ದಿನ ಮಲಗುವುದು, ರಾತ್ರಿ ತಡವಾಗಿ ಮಲಗುವುದು ಬೇಡ. ನಿಶ್ಚಿತ ನಿದ್ರೆ, ಆಹಾರ ಪಟ್ಟಿ ಅನುಸರಿಸಿ.

* ರಜೆಯೆಂದು ಲ್ಯಾಪ್‍ಟಾಪ್, ಮೊಬೈಲ್ ನಿಂದ ದೂರವಿರಿ. ಯಾಕೆಂದರೆ ಕೆಲವೊಮ್ಮೆ ಅವು ಕೂಡ ನಿಮ್ಮ ಮೂಡನ್ನು ಹಾಳು ಮಾಡುತ್ತವೆ.

* ನಿಮಗಿಷ್ಟದ ಹವ್ಯಾಸದಲ್ಲಿ ಸಮಯ ದೂಡಿರಿ. ವ್ಯಕ್ತಿಗತ ಸಂತೋಷಕ್ಕೆ ಮಾಡುವ ಕೆಲಸ ಮತ್ತಷ್ಟು ಉತ್ಸಾಹದ್ದಾಗಿರುತ್ತದೆ. ಹಾಬಿ ಎಂಬುದು ನಿಮ್ಮ ಮಾನಸಿಕ ವಿಕಾಸ. ಅದು ವಾರವಿಡೀ ನಿಮ್ಮನ್ನು ತಾಜಾವಾಗಿಡುತ್ತದೆ.

* ಸ್ನೇಹಿತರು, ಬಂಧುಗಳನ್ನು ಭೇಟಿಯಾಗಿ ಅವರೊಡನೆ ಸಮಯ ಕಳೆದು ನಿಮ್ಮ ನೆನಪಿನಲ್ಲಿ ಗುರುತು ಮಾಡಿಕೊಳ್ಳಿ. ಇದು ನಿಮ್ಮನ್ನು ರೀಚಾರ್ಜ್ ಮಾಡುತ್ತದೆ.

* ರಜೆಯೆಂದು ಬರಿ ವಿಶ್ರಾಂತಿಯಲ್ಲ. ಸೈಕ್ಲಿಂಗ್, ವ್ಯಾಯಾಮ ಇಂಥವುಗಳಲ್ಲಿ ತೊಡಗಿಕೊಳ್ಳಬೇಕು.

* ರಜೆಯನ್ನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ಲಾನ್ ಮಾಡಿಕೊಳ್ಳಿ. ಅದರಿಂದ ಪರಿಚಯಗಳು ಹೆಚ್ಚುವುದಲ್ಲದೆ, ಒಳ್ಳೆಯ ಕೆಲಸದ ಸಂತೃಪ್ತಿಯೂ ಇರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...