ಮಹಿಳೆಯರು ಸುಂದರವಾದ ತ್ವಚೆಯನ್ನು ಪಡೆಯಲು ಹಲವು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇವುಗಳು ಚರ್ಮದ ಮೇಲೆ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಇದರ ಬದಲು ಮನೆಯಲ್ಲಿಯೇ ತಯಾರಿಸಿದ ಕೆಲವು ಫೇಸ್ ಪ್ಯಾಕ್ ಗಳನ್ನು ವಾರದಲ್ಲಿ 3 – 4 ಬಾರಿ ಬಳಸಿದರೆ ಸಾಕು. ನಿಮ್ಮ ತ್ವಚೆಯ ಕಾಂತಿ ಹೊಳೆಯುತ್ತದೆ.
ಮುಖದ ಕಾಂತಿ ಹೆಚ್ಚಾಗಲು ಮಸೂರ್ ದಾಲ್ ಫೇಸ್ ಪ್ಯಾಕ್ ಅನ್ನು ಬಳಸಿ. 2ಚಮಚ ಮಸೂರ್ ದಾಲ್ ಪುಡಿ ಗೆ 1 ಚಮಚ ಮೊಸರು ಮತ್ತು ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಇದು ಎಣ್ಣೆಯುಕ್ತ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಿ ಚರ್ಮವನ್ನು ಮೃದುವಾಗಿಸುತ್ತದೆ.
ಬೇವಿನ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ವಾರದಲ್ಲಿ 3-4 ಬಾರಿ ಮುಖಕ್ಕೆ ಹಚ್ಚಿ. ಇದು ಮುಖದ ಕಲೆಗಳನ್ನು ನಿವಾರಿಸುತ್ತದೆ ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
BIG NEWS: ಮೈಸೂರು 38, ಕೊಡಗು 30 ಸೇರಿ ರಾಜ್ಯದಲ್ಲಿಂದು 399 ಜನರಿಗೆ ಸೋಂಕು
ಸೌತೆಕಾಯಿಯನ್ನು ತುರಿದು ರಸ ತೆಗೆದು ಅದಕ್ಕೆ 1 ಚಮಚ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಫ್ರಿಜ್ ನಲ್ಲಿ ಕೆಲಕಾಲವಿಟ್ಟು ಬಳಿಕ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಇದನ್ನು ವಾರದಲ್ಲಿ 3 ಬಾರಿ ಬಳಸಿ. ಇದರಿಂದ ಚರ್ಮ ಮೃದುವಾಗುತ್ತದೆ. ಹೊಳೆಯುವ, ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.