alex Certify ವಾರಕ್ಕೆ ಮೂರು ಬಾರಿ ʼಅಣಬೆʼ ಸೇವನೆಯಿಂದ ಸಿಗುತ್ತೆ ಈ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಕ್ಕೆ ಮೂರು ಬಾರಿ ʼಅಣಬೆʼ ಸೇವನೆಯಿಂದ ಸಿಗುತ್ತೆ ಈ ಲಾಭ

ವಾರದಲ್ಲಿ ಮೂರು ಬಾರಿ ಮಶ್ರೂಂ(ಅಣಬೆ) ತಿಂದರೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಪ್ಪಿಸಬಹುದು ಎಂಬುದನ್ನು ಸಂಶೋಧಕರು ಹೇಳಿದ್ದಾರೆ.

ಇದರ ಪ್ರಕಾರ, ಜಪಾನಿನ ಮಧ್ಯವಯಸ್ಕ ಮತ್ತು ವಯಸ್ಸಾದ ಪುರುಷರಲ್ಲಿ ಮಶ್ರೂಂ ಸೇವನೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಡುವೆ ವಿಲೋಮ ಸಂಬಂಧ ಇದೆ ಎಂದು ತಿಳಿಸಿದೆ.

1990 ರಲ್ಲಿ ಮಿಯಾಗಿ ಕೊಹೋರ್ಟ್ ಅಧ್ಯಯನದಲ್ಲಿ 40 ರಿಂದ 79 ರ ವಯೋಮಾನದ ಒಟ್ಟು 36,499 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಸಂಶೋಧನೆ ನಡೆಸಿದ ಜಪಾನಿನ ತೊಹೊಕು ಯೂನಿವರ್ಸಿಟಿಯ ಸಂಶೋಧಕರು ಇವರ ಪೈಕಿ ಶೇ.3.3 ರಷ್ಟು ಜನರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇದ್ದಿದ್ದನ್ನು ಪತ್ತೆ ಮಾಡಿದ್ದಾರೆ.

ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಶ್ರೂಂ ತಿಂದರೆ ಶೇ.8 ರಷ್ಟು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯ ತಗ್ಗುತ್ತದೆ ಮತ್ತು ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮಶ್ರೂಂ ಅನ್ನು ಸೇವನೆ ಮಾಡಿದರೆ ಶೇ.17 ರಷ್ಟು ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ ಎಂಬುದನ್ನು ದೃಢಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...