ಫೇಸ್ ಸ್ಟೀಮಿಂಗ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್‌ಗಳಲ್ಲಿ ಇದನ್ನು ಮಾಡ್ತಾರೆ. ಕೆಲವರು ಮನೆಯಲ್ಲೂ ಬಿಸಿನೀರಿನ ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳುವುದನ್ನು ನೀವು ನೋಡಿರಬಹುದು. ಈ ರೀತಿ ಯಾಕೆ ಮಾಡಲಾಗುತ್ತದೆ? ಫೇಸ್ ಸ್ಟೀಮಿಂಗ್‌ನಿಂದ ಏನೇನು ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ. ಹಬೆ ತೆಗೆದುಕೊಳ್ಳುವಾಗ ಕೆಲವರು ಬಿಸಿ ನೀರಿಗೆ ಬೇವು, ಉಪ್ಪು, ನಿಂಬೆ ಮುಂತಾದವುಗಳನ್ನು ಸೇರಿಸುತ್ತಾರೆ. ಇದರ ಹಿಂದೆ ತ್ವಚೆಗೆ ಸಂಬಂಧಿಸಿದ ಕೆಲವು ರಹಸ್ಯಗಳು ಅಡಗಿವೆ.
ಕ್ಲೆನ್ಸಿಂಗ್ – ಫೇಸ್ ಸ್ಟೀಮಿಂಗ್ ಮಾಡಿಕೊಳ್ಳುವುದರಿಂದ ಮುಖದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಕೊಳೆ ಮತ್ತು ಡೆಡ್ ಸ್ಕಿನ್ ಹೊರಬರುತ್ತದೆ. ಅದರಲ್ಲೂ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್‌ನಿಂದ ತೊಂದರೆಗೊಳಗಾಗಿರುವವರು ಫೇಸ್ ಸ್ಟೀಮಿಂಗ್ ಮಾಡಿಕೊಳ್ಳುವುದು ಉತ್ತಮ. ಇದು ಮುಖವನ್ನು ಶುಚಿಗೊಳಿಸುತ್ತದೆ.
ರಕ್ತ ಪರಿಚಲನೆ – ತ್ವಚೆಯ ಬಗ್ಗೆ ನೀವು ಎಷ್ಟೇ ಕಾಳಜಿ ವಹಿಸಿದರೂ ಕೆಲವೊಮ್ಮೆ ಅದು ಮಂದ ಮತ್ತು ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಫೇಸ್ ಸ್ಟೀಮಿಂಗ್ ಸಹಾಯವನ್ನು ತೆಗೆದುಕೊಳ್ಳಿ. ಇದು ಚರ್ಮದ ರಕ್ತ ಪರಿಚಲನೆ ಸುಧಾರಿಸಲು ತುಂಬಾ ಪರಿಣಾಮಕಾರಿಯಾಗಿದೆ.
ಸ್ಕಿನ್ ಹೈಡ್ರೇಶನ್- ಕೆಲವೊಮ್ಮೆ ನೀರಿನ ಕೊರತೆಯಿಂದಾಗಿ ನಮ್ಮ ಮುಖದ ಚರ್ಮವು ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ. ತ್ವಚೆಯ ಸಾಮರ್ಥ್ಯವನ್ನು ಹೆಚ್ಚಿಸಲು ಫೇಸ್ ಸ್ಟೀಮಿಂಗ್ ಮಾಡಬೇಕು. ಇದರಿಂದ ಮುಖವನ್ನು ಹೈಡ್ರೇಟ್ ಆಗಿಡಬಹುದು. ಫೇಸ್ ಸ್ಟೀಮಿಂಗ್‌ನಿಂದ ಮುಖ ಹೊಳಪು ಪಡೆಯುತ್ತದೆ. ಚರ್ಮ ಯಂಗ್ ಆಗಿರುತ್ತದೆ – ಹಬೆಯನ್ನು ತೆಗೆದುಕೊಳ್ಳುವುದರಿಂದ ಮುಖದ ಮೇಲೆ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯು ಹೆಚ್ಚಾಗುತ್ತದೆ, ಇದರಿಂದಾಗಿ ನಮ್ಮ ಮುಖವು ಹೊಳೆಯುತ್ತದೆ. ತಜ್ಞರು ವಾರಕ್ಕೆ 3 ಬಾರಿ ಫೇಸ್ ಸ್ಟೀಮಿಂಗ್ ಮಾಡಲು ಸಲಹೆ ನೀಡುತ್ತಾರೆ.