ಭಾರತದ ಹಲವು ಭಾಗಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ತಂಪಾಗಿದೆ. ಈ ಸಮಯದಲ್ಲಿ ದೈನಂದಿನ ಆಹಾರದಲ್ಲಿ ನಾವು ದೇಹಕ್ಕೆ ಉಷ್ಣತೆ ನೀಡುವಂತಹ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಗರಂ ಮಸಾಲ ಕೂಡ ಇವುಗಳಲ್ಲೊಂದು. ದೇಶದ ಪ್ರತಿ ಮನೆಯಲ್ಲೂ ಇದನ್ನು ಬಳಸಲಾಗುತ್ತದೆ. ಗರಂ ಮಸಾಲದಲ್ಲಿ ಏಲಕ್ಕಿ, ಕಾಳುಮೆಣಸು, ಪಲಾವ್ ಎಲೆ ಜೀರಿಗೆ ಸೇರಿದಂತೆ ಅನೇಕ ಮಸಾಲೆ ಪದಾರ್ಥಗಳಿರುತ್ತವೆ.
ಈ ಮಸಾಲೆಗಳನ್ನು ವಿವಿಧ ಪಕ್ವಾನ್ನಗಳಿಗೆ ಸೇರಿಸುವುದರಿಂದ ಅವುಗಳ ರುಚಿ ದುಪ್ಪಟ್ಟಾಗುತ್ತದೆ. ಗರಂ ಮಸಾಲೆಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಅದಕ್ಕಾಗಿಯೇ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಉತ್ತಮ ಜೀರ್ಣಕ್ರಿಯೆ: ಗರಂ ಮಸಾಲ ನಮ್ಮ ಹೊಟ್ಟೆಗೆ ತುಂಬಾ ಒಳ್ಳೆಯದು. ತರಕಾರಿಗಳು ಮತ್ತು ಭಕ್ಷ್ಯಗಳಿಗೆ ಸೇರಿಸಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಬಹುದು. ವಾಸ್ತವವಾಗಿ ಗರಂ ಮಸಾಲಾ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ರಸವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗುತ್ತದೆ. ಮಲಬದ್ಧತೆ, ಗ್ಯಾಸ್ ಮತ್ತು ವಾಂತಿಯಂತಹ ಯಾವುದೇ ಸಮಸ್ಯೆಗಳಿರುವುದಿಲ್ಲ.
ಹೃದಯದ ಆರೋಗ್ಯ: ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಹೃದಯಾಘಾತದಿಂದ ಪ್ರತಿ ವರ್ಷ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ. ಗರಂ ಮಸಾಲ ಸೇವನೆ ಮಾಡುವುದರಿಂದ ಪರಿಧಮನಿಗೆ ಸಂಬಂಧಪಟ್ಟ ಕಾಯಿಲೆಯಿಂದ ರಕ್ಷಣೆ ಸಿಗುತ್ತದೆ. ಅದರಲ್ಲೂ ಏಲಕ್ಕಿ ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ದಿನಕ್ಕೆ ಒಂದು ಏಲಕ್ಕಿಯನ್ನು ಅಗಿದು ತಿನ್ನುವುದು ಆರೋಗ್ಯಕರ.
ಬಾಯಿಯ ಆರೋಗ್ಯ: ಬಾಯಿಯ ದುರ್ವಾಸನೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಬಾಯಿಯ ವಾಸನೆಯಿಂದಾಗಿ ಅನೇಕ ಬಾರಿ ನಾವು ಮುಜುಗರಕ್ಕೀಡಾಗುವ ಸ್ಥಿತಿ ಎದುರಾಗುತ್ತದೆ. ದೈನಂದಿನ ಆಹಾರದಲ್ಲಿ ಗರಂ ಮಸಾಲ ಬಳಸಿದರೆ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು. ಈ ಮಸಾಲೆಗಳು ಕ್ಯಾಲ್ಸಿಯಂ ಮತ್ತು ಒಮೆಗಾ 6 ಅನ್ನು ಹೊಂದಿರುತ್ತವೆ. ಬ್ಯಾಕ್ಟೀರಿಯಾದ ವಿರುದ್ಧ ಇವು ಹೋರಾಡಬಲ್ಲವು.