ವಾಣಿಜ್ಯ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶವಿದೆ. NABARD, ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಮತ್ತು ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ನಬಾರ್ಡ್ ಗೆ ಕನ್ಸಲ್ಟೆನ್ಸಿ ಸೇವೆ ಒದಗಿಸುತ್ತಿರುವ NABCONS ಈ ಸಂಬಂಧ ಪ್ರಕಟಣೆ ಹೊರಡಿಸಿದೆ. ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಜಿಯನ್ನು ಸಲ್ಲಿಸಲು 2022ರ ಏಪ್ರಿಲ್ 6 ಕೊನೆಯ ದಿನಾಂಕ.
ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. 40 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಯ ಆಕಾಂಕ್ಷಿಗಳು 25 ರಿಂದ 35 ವರ್ಷದೊಳಗಿನವರಾಗಿರಬೇಕು. ಅಭ್ಯರ್ಥಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಓದುವುದು, ಬರೆಯುವುದು ಮತ್ತು ಮಾತನಾಡುವುದರಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು. MS ಎಕ್ಸೆಲ್, ಪವರ್‌ಪಾಯಿಂಟ್ ಮತ್ತು MS ಆಫೀಸ್‌ನಲ್ಲಿ ಅತ್ಯುತ್ತಮ ಜ್ಞಾನವನ್ನು ಹೊಂದಿರಬೇಕು.
ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟಂಟ್ – ಫೈನಾನ್ಸ್ & ಅಕೌಂಟ್ಸ್, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ವಾಣಿಜ್ಯ ವಿಷಯದಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
CA/CFA/ICWA ವಿದ್ಯಾರ್ಹತೆಯನ್ನು ICAI/ICWA ಅಥವಾ ತತ್ಸಮಾನ ಅಥವಾ ಪ್ರತಿಷ್ಠಿತ ಸಂಸ್ಥೆಯಿಂದ MBA ಫೈನಾನ್ಸ್ ಅಥವಾ ಹೆಸರಾಂತ ವಿಶ್ವವಿದ್ಯಾಲಯದಿಂದ CA (ಇಂಟರ್) ಅಥವಾ M.Com ನಲ್ಲಿ ನೋಂದಣಿಯನ್ನು ಹೊಂದಿರಬೇಕು.
ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಗೌರವಾನ್ವಿತ ಸಂಸ್ಥೆಯಿಂದ ಕನಿಷ್ಠ 50%ರಷ್ಟು ಅಂಕಗಳೋಂದಿಗೆ ವಾಣಿಜ್ಯ ಪದವಿ ಪಡೆದಿರಬೇಕು.
ಹಣಕಾಸು/ಬ್ಯಾಂಕಿಂಗ್ ಮತ್ತು ಅಕೌಂಟಿಂಗ್‌ನಲ್ಲಿ ಹೆಚ್ಚುವರಿ ವಿದ್ಯಾರ್ಹತೆಗಳನ್ನು ಪರಿಗಣಿಸಲಾಗುತ್ತದೆ. ಮೇಲಾಗಿ ಹಣಕಾಸು ವಿಷಯದಲ್ಲಿ ಎಂಬಿಎ ಅಥವಾ ಪ್ರತಿಷ್ಠಿತ ಸಂಸ್ಥೆಗಳಿಂದ ತತ್ಸಮಾನ ವಿದ್ಯಾರ್ಹತೆ ಪಡೆದಿರಬಹುದು.
ಇದರ ಹೊರತಾಗಿ ಎರಡೂ ಹುದ್ದೆಗಳಿಗೆ ಕೆಲವು ಅನುಭವದ ಅವಶ್ಯಕತೆಗಳಿವೆ, ಇದಕ್ಕಾಗಿ ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನಿಸಬಹುದು. ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟೆಂಟ್ (ಫೈನಾನ್ಸ್ & ಅಕೌಂಟ್ಸ್) ಹುದ್ದೆಗೆ ಆಯ್ಕೆಯಾಗುವವರಿಗೆ 55,000 ದಿಂದ 60,000 ರೂಪಾಯಿ ವೇತನ ನಿಗದಿಪಡಿಸಲಾಗಿದೆ.
ಪ್ರಾಜೆಕ್ಟ್ ಅಸೋಸಿಯೇಟ್ (ಫೈನಾನ್ಸ್ & ಅಕೌಂಟ್ಸ್) ಹುದ್ದೆಗೆ ಆಯ್ಕೆಯಾದವರಿಗೆ 35,000 ರಿಂದ 45,000 ರೂಪಾಯಿ ಸಂಬಳ ದೊರೆಯಲಿದೆ. ಆಸಕ್ತರು ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿದೆ.