ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ಅಪ್ಡೇಟ್ ನೀಡುವ ಮೂಲಕ ಮತ್ತಷ್ಟು ಹತ್ತಿರವಾಗುತ್ತಿದೆ. ಇದೀಗ ವಾಟ್ಸಾಪ್ ನಲ್ಲಿ ಮತ್ತೆರಡು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದ್ದು, ಗ್ರಾಹಕ ಸ್ನೇಹಿಯಾಗಿದೆ.
ವಾಟ್ಸಾಪ್ ನ ‘ಮೆಸೇಜ್ ಯುವರ್ ಸೆಲ್ಫ್’ ವೈಶಿಷ್ಟ್ಯತೆ ಮೂಲಕ ಬಳಕೆದಾರರು ತಮಗೆ ತಾವೇ ಸಂದೇಶಗಳನ್ನು ಕಳುಹಿಸಿಕೊಳ್ಳಬಹುದಾಗಿದ್ದು, ಇದರಿಂದಾಗಿ ಮಹತ್ವದ ಮಾಹಿತಿಗಳನ್ನು ಮತ್ತೊಬ್ಬರಿಗೆ ಕಳುಹಿಸಿ ಸಂಗ್ರಹಿಸಿಡುವ ಬದಲು ತಮ್ಮ ಸಂಖ್ಯೆಗೇ ಇದನ್ನು ಕಳುಹಿಸಿ ಸ್ಟೋರ್ ಮಾಡಬಹುದಾಗಿದೆ.
ಹಾಗೆಯೇ ಕ್ಯಾಪ್ಶನ್ ಫಾರ್ವರ್ಡ್ ಎಂಬ ಮತ್ತೊಂದು ಫೀಚರ್ನಲ್ಲಿ ಫೋಟೋ ಅಥವಾ ವಿಡಿಯೋ ಫಾರ್ವರ್ಡ್ ಮಾಡುವ ವೇಳೆ ಅಡಿಬರಹ ಸಹ ಕಳುಹಿಸಬಹುದಾಗಿದೆ. ಈ ಮೊದಲು ಅಡಿಬರಹವಿಲ್ಲದೆ ಫೋಟೋ ಹಾಗೂ ವಿಡಿಯೋ ಸೆಂಡ್ ಆಗುತ್ತಿತ್ತು.