ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್, ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಸ್ನೇಹಮಹಿ ಆಗುತ್ತಿದೆ. ಇತ್ತೀಚೆಗಷ್ಟೇ ಕೆಲವೊಂದು ವೈಶಿಷ್ಟ್ಯಗಳನ್ನು ಪರಿಚಯಿಸಿದ್ದ ಸಾಮಾಜಿಕ ಜಾಲತಾಣದ ಈ ಫ್ಲ್ಯಾಟ್ ಫಾರ್ಮ್ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ.
ಹೌದು, ನಿರ್ದಿಷ್ಟ ದಿನಾಂಕದ ಸಂದೇಶಗಳನ್ನು ಹುಡುಕಲು ಅನುಕೂಲವಾಗುವಂತೆ ಹೊಸ ಫೀಚರ್ ಹೊರ ತರಲು ಸಿದ್ಧತೆ ನಡೆಸಲಾಗಿದ್ದು, ಇದು ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಇದೆ ಎಂದು ತಿಳಿದು ಬಂದಿದೆ. ಆ ಬಳಿಕ ಆಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರಿಗೆ ಇದು ಲಭ್ಯವಾಗುವ ನೀರಿಕ್ಷೆ ಇದೆ.
ವಾಟ್ಸಾಪ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂದೇಶಗಳು ಇದ್ದ ವೇಳೆ ಅವುಗಳನ್ನು ಹುಡುಕಲು ಸ್ಕ್ರಾಲ್ ಮಾಡಬೇಕಾಗುತ್ತದೆ. ಹೀಗಾಗಿ ಎಂಟತ್ತು ತಿಂಗಳ ಹಿಂದಿನ ಸಂದೇಶ ಹುಡುಕಬೇಕೆಂದರೆ ಬಲು ಕಷ್ಟವಾಗುತ್ತದೆ. ಹೀಗಾಗಿ ಬಳಕೆದಾರರಿಗೆ ಹೊಸ ಫೀಚರ್ ಲಭ್ಯವಾದರೆ ನಿರ್ದಿಷ್ಟ ದಿನಾಂಕವನ್ನು ನಮೂದಿಸಿದರೆ ಆ ದಿನದ ಎಲ್ಲ ಸಂದೇಶಗಳು ಸಿಗಲಿವೆ.