ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸಾಪ್ ಈಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಬಳಕೆದಾರರು ಅವಸರದಲ್ಲಿ ತಪ್ಪಾದ ಸಂದೇಶ ಕಳುಹಿಸಿದ ವೇಳೆ ಅದನ್ನು ಎಡಿಟ್ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.
ಈ ಹಿಂದೆ ಬಳಕೆದಾರರು ಯಾವುದಾದರೂ ಸಂದೇಶವನ್ನು ತಪ್ಪಾಗಿ ಕಳುಹಿಸಿದ ಸಂದರ್ಭದಲ್ಲಿ ಅದನ್ನು ಡಿಲೀಟ್ ಮಾಡಿ ಮತ್ತೊಮ್ಮೆ ಕಳುಹಿಸಬೇಕಾಗಿತ್ತು. ಆದರೆ ಇದೀಗ ಕಳುಹಿಸಿದ ಸಂದೇಶವನ್ನೇ ಎಡಿಟ್ ಮಾಡಲು ಅವಕಾಶ ಸಿಗಲಿದೆ.
ಈಗಾಗಲೇ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಸಪೋರ್ಟ್ ಮಾಡುವ ಬೀಟಾ ಆವೃತ್ತಿಯ ವಾಟ್ಸಾಪ್ ಆಪ್ಲಿಕೇಶನ್ ನಲ್ಲಿ ಎಡಿಟ್ ಮಾಡುವ ವೈಶಿಷ್ಟ್ಯವನ್ನು ನೀಡಲಾಗಿದ್ದು, ಅತಿ ಶೀಘ್ರದಲ್ಲೇ ಈ ಅವಕಾಶ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.