alex Certify ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಕಳಿಸಿದ ಮೆಸೇಜ್ ಅನ್ನು ‘ಎಡಿಟ್’ ಮಾಡಲು ಸಿಗಲಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಕಳಿಸಿದ ಮೆಸೇಜ್ ಅನ್ನು ‘ಎಡಿಟ್’ ಮಾಡಲು ಸಿಗಲಿದೆ ಅವಕಾಶ

ಸಾಮಾಜಿಕ ಜಾಲತಾಣದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ತನ್ನ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ಮೆಟಾ ಒಡೆತನದ ಈ ಕಂಪನಿ ಮತ್ತೊಂದು ಫೀಚರ್ ಅನ್ನು ಸಕ್ರಿಯಗೊಳಿಸಿದೆ.

ವಾಟ್ಸಾಪ್ ಬಳಕೆದಾರರು ತಾವು ಸಂದೇಶವನ್ನು ಕಳುಹಿಸಿದ ಬಳಿಕವೂ ಎಡಿಟ್ ಮಾಡುವ ಅವಕಾಶ ಸಿಗಲಿದ್ದು, ಆದರೆ ಇದನ್ನು 15 ನಿಮಿಷಗಳ ಕಾಲ ಮಿತಿಯೊಳಗೆ ಮಾತ್ರ ಮಾಡಬಹುದಾಗಿದೆ. ಇದರಿಂದಾಗಿ ಒಂದೊಮ್ಮೆ ತಪ್ಪು ಸಂದೇಶ ಕಳುಹಿಸಿದ್ದರೆ ಅದನ್ನು ಈ ಅವಧಿಯಲ್ಲಿ ಸರಿ ಮಾಡಿ ಮತ್ತೆ ಕಳುಹಿಸಬಹುದಾಗಿದೆ.

ಸದ್ಯಕ್ಕೆ ಬೀಟಾ ಆವೃತ್ತಿಯಲ್ಲಿ ಈ ವೈಶಿಷ್ಟ್ಯ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಇದು ಸಿಗಲಿದೆ ಎಂದು ತಿಳಿದುಬಂದಿದೆ. ಇದುವರೆಗೆ ಆಪಲ್ ಸಂಸ್ಥೆಯ ಐಫೋನ್ ನ ‘ಐ ಮೆಸೇಜ್’ ತಂತ್ರಾಂಶದಲ್ಲಿ ಈ ಸೌಲಭ್ಯವಿದ್ದು, ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಈ ವೈಶಿಷ್ಟ್ಯ ಲಭ್ಯವಿರಲಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...