ಅಕ್ರಮ, ಅಶ್ಲೀಲ, ಮಾನಹಾನಿಕರ ಮತ್ತು ಬೆದರಿಕೆ ಸಂದೇಶ, ಹಿಂಸೆಗೆ ಪ್ರಚೋದನೆ, ನಕಲಿ ಸುದ್ದಿ ಹರಡುವ ಖಾತೆಗಳ ಮೇಲೆ ಇದೀಗ ವಾಟ್ಸಾಪ್ ನಿಗಾ ಇಟ್ಟಿದೆ. ಈ ಮೂಲಕ ಕಳೆದ ಆಗಸ್ಟ್ ಒಂದೇ ತಿಂಗಳಲ್ಲೇ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಬರೋಬ್ಬರಿ 23 ಲಕ್ಷ ಖಾತೆಗಳನ್ನು ನಿಷೇಧ ಮಾಡಲಾಗಿದೆ. ಹೀಗೆ ಕಳೆದ ಎರಡು ವರ್ಷಗಳಲ್ಲಿ 3 ಕೋಟಿಗೂ ಅಧಿಕ ಖಾತೆಗಳಳನ್ನು ಬ್ಲಾಕ್ ಮಾಡುವ ಮೂಲಕ ಈ ರೀತಿ ಮಾಡುವವರಿಗೆ ಎಚ್ಚರಿಕೆ ಕೊಟ್ಟಿದೆ.
ಇದರ ಜೊತೆಗೆ ವಾಟ್ಸಾಪ್ ಯುಸ್ ಮಾಡುವವರಿಗೆ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯುಲೇಷನ್ ಹೇಳಿದೆ. ಜೊತೆಗೆ ಅಸಹಜ ನಡವಳಿಕೆಯಲ್ಲಿ ತೊಡಗಿರುವ ವಾಟ್ಸಾಪ್ ಖಾತೆಗಳನ್ನು ಗುರುತಿಸಲು ಮತ್ತು ಕ್ರಮ ತೆಗೆದುಕೊಳ್ಳಲು ವಾಟ್ಸಾಪ್ ಸ್ಪ್ಯಾಮ್ ಪತ್ತೆ ತಂತ್ರಜ್ಞಾನವನ್ನು ಬಳಸುತ್ತಿದೆ. ಇದರ ಪ್ರಕಾರ ನೀವು ಗುಡ್ ಮಾರ್ನಿಂಗ್ ಅಂತ ಕಳುಹಿಸುವ ಖಾತೆಗಳು ಬಂದ್ ಆಗೋ ಸಾಧ್ಯತೆ ಇರುತ್ತದೆ.
ಇನ್ನು ನಿಮ್ಮ ಖಾತೆಯಲ್ಲಿ ಸೇವ್ ಇಲ್ಲದೇ ಇರೋ ನಂಬರ್ ಗೆ ಮೆಸೇಜ್, ವಿಡಿಯೋ ಕಾಲ್ ಕಿರಿ ಕಿರಿ ಮಾಡಿದರೂ ಸಮಸ್ಯೆ ತಪ್ಪಿದ್ದಲ್ಲ. ವಾಟ್ಸಾಪ್ ಪ್ಲಸ್ ಎನ್ನುವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ, ವಾಟ್ಸಾಪ್ ಗೋಲ್ಡ್, ವಾಟ್ಸಾಪ್ ಪ್ರೊ ಎನ್ನುವ ಅಪ್ಲಿಕೇಶನ್ ಬಳಕೆ ಕೂಡ ಸಮಸ್ಯೆ ಗ್ಯಾರಂಟಿ. ಈ ಮೂಲಕ ವಾಟ್ಸಾಪ್ ನಲ್ಲಿ ಸುಧಾರಣೆ ಮಾಡಲು ಹೊರಟಿದೆ ಈ ಸಂಸ್ಥೆ.