alex Certify ವಾಟ್ಸಾಪ್‌ ಮೂಲಕವೂ ಆಧಾರ್ ಡೌನ್ಲೋಡ್‌…! ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್‌ ಮೂಲಕವೂ ಆಧಾರ್ ಡೌನ್ಲೋಡ್‌…! ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪರಿಚಯಿಸಿದ್ದ ಆನ್‌ಲೈನ್ ಡಿಜಿಟಲೀಕರಣ ಸೇವೆ, ಡಿಜಿಲಾಕರ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಡ್ರೈವಿಂಗ್‌ ಲೈಸನ್ಸ್‌, ವಾಹನ ನೋಂದಣಿ ದಾಖಲೆ, ಶೈಕ್ಷಣಿಕ ಪ್ರಮಾಣಪತ್ರಗಳು ಸೇರಿದಂತೆ ನಿಮ್ಮ ಮಹತ್ವದ ದಾಖಲೆಗಳ ಡಿಜಿಟಲ್ ಆವೃತ್ತಿಗಳನ್ನು ಡಿಜಿಲಾಕರ್‌ನಲ್ಲಿ ಸೇವ್‌ ಮಾಡಿಟ್ಟುಕೊಳ್ಳಬಹುದು. ಯಾವಾಗ ಬೇಕಾದ್ರೂ, ಎಲ್ಲಿ ಬೇಕಾದ್ರೂ ಇದು ಲಭ್ಯವಾಗುತ್ತದೆ.

ಆಧಾರ್ ಕಾರ್ಡ್‌ ಹೊಂದಿರುವವರು ನಿರ್ದಿಷ್ಟ ಡಿಜಿಲಾಕರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗೆ ಈಗಾಗ್ಲೇ ಪ್ರವೇಶವನ್ನು ಹೊಂದಿದ್ದರೂ, ಅದರ ಸೇವೆಗಳನ್ನು ವಾಟ್ಸಾಪ್‌ ಮೂಲಕವೂ ಪಡೆದುಕೊಳ್ಳಬಹುದು. ಆಸಕ್ತರು MyGov Helpdesk WhatsApp ಚಾಟ್‌ಬಾಟ್ ಅನ್ನು ಬಳಸಿಕೊಂಡು ಆಧಾರ್ ಕಾರ್ಡ್ ಅಥವಾ PAN ಕಾರ್ಡ್‌ನಂತಹ ದಾಖಲೆಗಳನ್ನು ಡಿಜಿಲಾಕರ್‌ನಿಂದ ಕ್ಷಣಮಾತ್ರದಲ್ಲಿ ಪಡೆಯಬಹುದು.

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್, ಗ್ರೇಡ್ ಇವೆಲ್ಲವನ್ನೂ ವಾಟ್ಸಾಪ್‌ ಮೂಲಕ ಪಡೆಯಲು ಅವಕಾಶವಿದೆ. ಡಿಜಿಲಾಕರ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲದೇ ಇದ್ದಲ್ಲಿ WhatsApp ಚಾಟ್‌ಬಾಟ್ ಸೇವೆಯು ಉಪಯುಕ್ತವಾಗಿರುತ್ತದೆ.

ವಾಟ್ಸಾಪ್‌ ಚಾಟ್‌ಬಾಟ್‌ ಸೇವೆಯ ಪ್ರಯೋಜನ ಪಡೆದುಕೊಳ್ಳಲು ಮೊದಲು ನಿಮ್ಮ ಫೋನ್‌ ಕಾಂಟಾಕ್ಟ್‌ನಲ್ಲಿ +91-9013151515 ನಂಬರ್‌ ಅನ್ನು MyGov HelpDesk ಎಂಬ ಹೆಸರಿನಲ್ಲಿ ಸೇವ್‌ ಮಾಡಿಕೊಳ್ಳಿ. ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ರಿಫ್ರೆಶ್ ಮಾಡಿ.

ಅಲ್ಲಿ MyGov HelpDesk ಚಾಟ್‌ಬಾಟ್‌ ಸರ್ಚ್‌ ಮಾಡಿ, ಅದನ್ನ ಓಪನ್‌ ಮಾಡಿಕೊಳ್ಳಿ. “ನಮಸ್ತೆ” ಅಥವಾ “ಹಲೋ” ಎಂದು ಟೈಪ್ ಮಾಡಿ ಸೆಂಡ್‌ ಮಾಡಿಬಿಡಿ. “Digilocker Services” ಅಥವಾ “CO-WIN Services” ಆಯ್ಕೆ ಮಾಡಲು MyGov HelpDesk ಚಾಟ್‌ಬಾಟ್‌ನಿಂದ ನಿಮ್ಮನ್ನು ಪ್ರಾಂಪ್ಟ್ ಮಾಡಲಾಗುತ್ತದೆ. ಮೆನುವಿನಿಂದ ಡಿಜಿಲಾಕರ್ ಸೇವೆಗಳನ್ನು ಆಯ್ಕೆಮಾಡಿ.

ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದರೆ, MyGov HelpDesk ಚಾಟ್‌ಬಾಟ್ ಅದರ ಬಗ್ಗೆ ವಿಚಾರಿಸುತ್ತದೆ. ಆಗ “ಹೌದು” ಎಂಬುದನ್ನು ಆಯ್ಕೆಮಾಡಿ. ಇಲ್ಲದಿದ್ದರೆ, ಮೆನುವಿನಿಂದ ನೋ ಎಂಬುದನ್ನು ಆಯ್ಕೆಮಾಡಿ. ನೀವು ಈಗಾಗಲೇ ಡಿಜಿ ಲಾಕರ್ ಖಾತೆಯನ್ನು ಹೊಂದಿಲ್ಲದಿದ್ದರೆ ನೀವು ಅದನ್ನು ಡೌನ್ಲೋಡ್‌ ಮಾಡಿಕೊಳ್ಳಬೇಕು.

ನಿಮ್ಮ ಡಿಜಿಲಾಕರ್ ಖಾತೆಯನ್ನು ಸಂಯೋಜಿಸಲು ಮತ್ತು ದೃಢೀಕರಿಸಲು, ಚಾಟ್‌ಬಾಟ್ ಈಗ ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಸೆಂಡ್‌ ಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಚಾಟ್‌ಬಾಟ್ ಪಟ್ಟಿಗಳಲ್ಲಿ ನಿಮ್ಮ ಡಿಜಿಲಾಕರ್ ಖಾತೆಗೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ನೀವು ವೀಕ್ಷಿಸಬಹುದು.

ಡೌನ್‌ಲೋಡ್ ಮಾಡಲು, ಡಾಕ್ಯುಮೆಂಟ್‌ನ ಪಟ್ಟಿ ಮಾಡಲಾದ ಸಂಖ್ಯೆಯನ್ನು ನಮೂದಿಸಿ ಕಳುಹಿಸಿ. ನಿಮ್ಮ ಡಾಕ್ಯುಮೆಂಟ್‌ನ PDF ಆವೃತ್ತಿಯನ್ನು ಚಾಟ್ ಬಾಕ್ಸ್‌ನಲ್ಲಿ ತೋರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...