ವಾಟ್ಸಾಪ್‌ನಲ್ಲಿ ಹಲವು ಸ್ಫೋಟಕ ಫೀಚರ್‌ಗಳು ಬಂದಿವೆ. ಇದೀಗ ವಾಟ್ಸಾಪ್ ಐಒಎಸ್‌ನಲ್ಲಿ ‘ಟೆಕ್ಸ್ಟ್ ಡಿಟೆಕ್ಷನ್’ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಬಳಕೆದಾರರಿಗೆ ಫೋಟೋಗಳಿಂದ ಟೆಕ್ಸ್ಟ್ ತೆಗೆದು ಹಾಕಲು ಅನುವು ಮಾಡಿಕೊಡುತ್ತದೆ. ವರದಿಯ ಪ್ರಕಾರ, iOS 23.5.77 ಗಾಗಿ ವಾಟ್ಸಾಪ್ ಅಪ್‌ಡೇಟ್ ಮಾಡಲಾಗಿತ್ತು. ಕಂಪನಿ ಎಲ್ಲಾ ಬಳಕೆದಾರರಿಗೂ ಈ ಫೀಚರ್ ಅನ್ನು ಒದಗಿಸಲಿದೆ.
ಬಳಕೆದಾರರು ಟೆಕ್ಸ್ಟ್ ಹೊಂದಿರುವ ಫೋಟೋಗಳನ್ನು ತೆಗೆದಾಗ ಆ ಪಠ್ಯ ಅಥವಾ ಅಕ್ಷರಗಳನ್ನು ನಕಲಿಸಲು ಅನುಮತಿಸುವ ಹೊಸ ಬಟನ್ ಲಭ್ಯವಾಗುತ್ತದೆ. ಗೌಪ್ಯತೆ ಕಾರಣಗಳಿಗಾಗಿ ಈ ಫೀಚರ್ ಫೋಟೋಗಳ ವೀಕ್ಷಣೆಗೆ ಹೊಂದಿಕೆಯಾಗುವುದಿಲ್ಲ. ಕಳೆದ ತಿಂಗಳು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಐಒಎಸ್‌ನಲ್ಲಿ ಸ್ಟಿಕ್ಕರ್ ಮೇಕರ್ ಟೂಲ್ ಅನ್ನು ಬಿಡುಗಡೆ ಬಗ್ಗೆ ವರದಿಯಾಗಿತ್ತು. ಅದು ಬಳಕೆದಾರರಿಗೆ ಫೋಟೋಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.
ಈ ವಾರದ ಆರಂಭದಲ್ಲಿ WhatsApp iOS ನಲ್ಲಿ ‘ವಾಯ್ಸ್ ಸ್ಟೇಟಸ್ ಅಪ್‌ಡೇಟ್’ ಫೀಚರ್ ಕೂಡ ಅಳವಡಿಸಲಾಗಿದೆ. ಬಳಕೆದಾರರು ವಾಯ್ಸ್ ನೋಟ್‌ಗಳನ್ನು ರೆಕಾರ್ಡ್ ಮಾಡಿ ಸ್ಟೇಟಸ್ ಮೂಲಕ ಹಂಚಿಕೊಳ್ಳಬಹುದು. ವಾಯ್ಸ್ ರೆಕಾರ್ಡಿಂಗ್‌ಗೆ ಗರಿಷ್ಠ ಸಮಯ 30 ಸೆಕೆಂಡುಗಳು. ಬಳಕೆದಾರರು ತಮ್ಮ ಸ್ಟೇಟಸ್ ಹಾಗೂ ಚಾಟ್‌ಗಳಿಗೆ ಈ ರೆಕಾರ್ಡಿಂಗ್ ಅನ್ನು ಫಾರ್ವರ್ಡ್ ಮಾಡಬಹುದು.