ವಾಟ್ಸಾಪ್ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರನ್ನು ಸೆಳೆಯುತ್ತಲೇ ಇದೆ. ಇದುವರೆಗೆ ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ ಫೋಟೋಗಳನ್ನು ಮಾತ್ರ ಫಾರ್ವರ್ಡ್ ಅಥವಾ ಶೇರ್ ಮಾಡಬಹುದಿತ್ತು. ಆದ್ರೀಗ ಆ ಮಿತಿಯನ್ನು ಹೆಚ್ಚಿಸಲಾಗಿದೆ.
ಇನ್ಮುಂದೆ ಬಳಕೆದಾರರು ಒಂದೇ ಬಾರಿಗೆ 100 ಕ್ಕೂ ಹೆಚ್ಚು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಸಾಧ್ಯ. ವಾಟ್ಸಾಪ್ ಈಗ Android ಬಳಕೆದಾರರಿಗಾಗಿ ಫೀಚರ್ ಅನ್ನು ಪರಿಚಯಿಸಿದೆ.
ಇದು Android ಆವೃತ್ತಿ 2.22.24.73ನಲ್ಲಿ ಲಭ್ಯವಿದೆ. ಈ ಫೀಚರ್ ಮೂಲಕ ನೀವು ಫೋಟೋ ಮತ್ತು ವಿಡಿಯೋ ಶೇರ್ ಮಾಡುವುದು ಇನ್ನಷ್ಟು ಸುಲಭವಾಗಲಿದೆ. ಇದು ಡಾಕ್ಯುಮೆಂಟ್‌ಗೆ ಶೀರ್ಷಿಕೆಗಳನ್ನು ಸೇರಿಸಲು ಬಳಕೆದಾರರನ್ನು ಅನುಮತಿಸುತ್ತದೆ. ಈ ಹಿಂದೆ ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳಿಗೆ ಮಾತ್ರ ಶೀರ್ಷಿಕೆಗಳನ್ನು ಬರೆಯಬಹುದಿತ್ತು. ಆದರೆ ಈಗ ಬಳಕೆದಾರರು ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಶೇರ್ ಮಾಡಿರುವ ಡಾಕ್ಯುಮೆಂಟ್‌ಗಳಿಗೆ ಶೀರ್ಷಿಕೆಗಳನ್ನು ಸೇರಿಸಬಹುದು.
ಇದಲ್ಲದೇ ವಾಟ್ಸಾಪ್ ಗ್ರೂಪ್ ಸಬ್ಜೆಕ್ಟ್ ಮತ್ತು ವಿವರಣೆಗಳಿಗಾಗಿ ಅಕ್ಷರ ಮಿತಿಯನ್ನು ಹೆಚ್ಚಿಸಿದೆ. ಸದ್ಯ ಹೊಸ ಫೀಚರ್ ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಇದನ್ನು iOS ಗೂ ಪರಿಚಯಿಸುವ ನಿರೀಕ್ಷೆಯಿದೆ. ಸದ್ಯದಲ್ಲೇ ‘ಕೆಪ್ಟ್ ಮೆಸೇಜ್’ ಎಂಬ ಮತ್ತೊಂದು ಫೀಚರ್ ಅಳವಡಿಸಲು ವಾಟ್ಸಾಪ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಡಿಲೀಟ್ ಆಗುವಂತಹ ಮೆಸೇಜ್‌ಗಳನ್ನು ಇರಿಸಿಕೊಳ್ಳಲು ಇದು ಅನುಮತಿಸುತ್ತಿದೆ.