
ಇದು ಸರಿಯಾದ ಸಮಯಕ್ಕೆ ನಿಮ್ಮ ಪೇಮೆಂಟ್ ಸೆಟಲ್ಮೆಂಟ್ನ್ನು ಮಾಡುತ್ತದೆ. ಈ ಮೂಲಕ ವಾಟ್ಸಾಪ್ ಪೇಮೆಂಟ್ ಕೂಡ ಜನಪ್ರಿಯ ಆನ್ಲೈನ್ ಪೇಮೆಂಟ್ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಹಣವನ್ನು ಕಳುಹಿಸುವುದು ಅಥವಾ ಸ್ವೀಕರಿಸುವುದು ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಪರಿಶೀಲನೆ ಮಾಡಲು ಇದು ಅನುವು ಮಾಡಿಕೊಡುತ್ತದೆ.
ವಾಟ್ಸಾಪ್ ಪೇಮೆಂಟ್ ಖಾತೆಗೆ ಬಳಕೆದಾರರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸೇರ್ಪಡೆ ಮಾಡಬಹುದಾಗಿದೆ. ನೀವು ನಿಮಗೆ ಬೇಕಾದಾಗ ನಿಮ್ಮಿಷ್ಟದ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಂಡು ವ್ಯವಹಾರವನ್ನು ನಡೆಸಬಹುದಾಗಿದೆ. ಅಲ್ಲದೇ ನಿಮಗೆ ಬೇಡ ಎನಿಸಿದಾಗ ಬ್ಯಾಂಕ್ ಖಾತೆಯನ್ನು ಡಿಲೀಟ್ ಮಾಡಲೂ ಸಹ ಇಲ್ಲಿ ಅವಕಾಶವಿದೆ.
ಹಾಗಾದರೆ ವಾಟ್ಸಾಪ್ ಪೇಮೆಂಟ್ನಲ್ಲಿ ನಿಮ್ಮ ಪ್ರೈಮರಿ ಬ್ಯಾಂಕ್ ಖಾತೆಯನ್ನು ಬದಲಾವಣೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ :
ಆಂಡ್ರಾಯ್ಡ್ :
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ಗೆ ಹೋಗಿ. ಇಲ್ಲಿ ಮೋರ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಪೇಮೆಂಟ್ ಎಂಬ ಆಯ್ಕೆ ಕಾಣಿಸುತ್ತದೆ. ಇಲ್ಲಿ ನೀವು ನಿಮಗೆ ಬೇಕಾದ ಬ್ಯಾಂಕ್ ಖಾತೆಯ ವಿವರವನ್ನು ಆಯ್ಕೆ ಮಾಡಿ Make primary account ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಐ ಫೋನ್ :
ವಾಟ್ಸಾಪ್ನಲ್ಲಿ ಸೆಟ್ಟಿಂಗ್ ಆಯ್ಕೆಗೆ ಹೋಗಿ .ಇಲ್ಲಿ ಕಾಣಸಿಗುವ ಪೇಮೆಂಟ್ಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮಿಷ್ಟದ ಬ್ಯಾಂಕ್ ಖಾತೆಯಲ್ಲಿ ಸೆಲೆಕ್ಟ್ ಮಾಡಿ ಬಳಿಕ Make primary account ಆಯ್ಕೆ ಕ್ಲಿಕ್ ಮಾಡಿ.
ಬ್ಯಾಂಕ್ ಖಾತೆಯನ್ನು ಅಳಿಸಿ ಹಾಕುವುದು ಹೇಗೆ…?
ವಾಟ್ಸಾಪ್ನಲ್ಲಿ ಪೇಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಯಾವ ಬ್ಯಾಂಕ್ ಖಾತೆಯನ್ನು ಡಿಲೀಟ್ ಮಾಡಬೇಕೆಂದುಕೊಂಡಿದ್ದಿರೋ ಅದನ್ನು ಸೆಲೆಕ್ಟ್ ಮಾಡಿ ಬಳಿಕ ರಿಮೂವ್ ಎಂಬ ಆಯ್ಕೆಯನ್ನು ಒತ್ತಿ