ವಸ್ತುಸಂಗ್ರಹಾಲಯಗಳು, ಚಿತ್ರಮಂದಿರಗಳು, ಸಂಗೀತ ಮತ್ತು ಕಲಾ ಗ್ಯಾಲರಿಗಳಿಗೆ ನಿಯಮಿತವಾಗಿ ಭೇಟಿ ನೀಡುವವರಿಗೊಂದು ಖುಷಿ ಸುದ್ದಿ. ಇಂಥವರ ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಯುಕೆಯಲ್ಲಿ ನಡೆದ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ.
ರಂಗಭೂಮಿ, ಸಂಗೀತ ಮತ್ತು ಕಲೆಯಂತಹ ಕಲೆಗಳೊಂದಿಗೆ ನಿಯಮಿತವಾಗಿ ಸಂಬಂಧ ಹೊಂದಿರುವ ಜನರ ಆರೋಗ್ಯವು ಉತ್ತಮವಾಗಿರುತ್ತದೆ. ಜೀವನ ವಿಧಾನವೂ ಸುಧಾರಿಸುತ್ತದೆ ಎಂದು ಈ ಅಧ್ಯಯನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಹಿಂದೆ ನಡೆದ ಅಧ್ಯಯನವೊಂದರಲ್ಲಿ ಕಲೆಯಲ್ಲಿ ತೊಡಗಿರುವ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ, ಖಿನ್ನತೆ, ಬುದ್ಧಿಮಾಂದ್ಯತೆ, ದೀರ್ಘಕಾಲದ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗಿತ್ತು.
ಸಂಶೋಧಕರು 50 ವರ್ಷ ಮೇಲ್ಪಟ್ಟ 6 ಸಾವಿರಕ್ಕೂ ಹೆಚ್ಚು ಜನರನ್ನು ಈ ಸಂಶೋಧನೆಗೆ ಬಳಸಿಕೊಂಡಿದ್ದರು. ಕಲೆ, ನಾಟಕ, ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ, ಕಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಜನರು ಇದ್ರಲ್ಲಿ ಸೇರಿದ್ದರು. ಇತರರಿಗೆ ಹೋಲಿಕೆ ಮಾಡಿದ್ರೆ ಇವ್ರ ಜೀವಿತಾವಧಿ ಶೇಕಡಾ 14ರಷ್ಟು ಹೆಚ್ಚಿತ್ತು.