ಪೈರಿಯಾ ಇದು ಹಲ್ಲಿಗೆ ಸಂಬಂಧಿಸಿದ ಕಾಯಿಲೆ. ದೇಹದಲ್ಲಿ ನ್ಯೂಟ್ರಿಷನ್ ಕಡಿಮೆ ಆದಾಗ ಈ ಸಮಸ್ಯೆ ಕಾಡುತ್ತದೆ. ಸುಲಭವಾಗಿ ಇದನ್ನು ನಿವಾರಿಸಿಕೊಳ್ಳುವುದಕ್ಕೆ ಹೀಗೆ ಮಾಡಿ.
ಒಂದು ವೀಳ್ಯದೆಲೆಗೆ ಚಿಕ್ಕ ಕರ್ಪೂರ ತುಂಡನ್ನು ಬೆರೆಸಿ ಚೆನ್ನಾಗಿ ಜಗಿದು ಉಗುಳಬೇಕು. ಯಾವುದೇ ಕಾರಣಕ್ಕೂ ನುಂಗಬಾರದು. ದಿನಕ್ಕೆ ಒಮ್ಮೆ ಹೀಗೆ ಮಾಡಿದರೆ ಸಾಕು. ಒಂದು ವಾರದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.
ಈ ಕಾಯಿಲೆಯಿಂದ ವಸಡಿನಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಒಂದು ಎಸಳು ಬೆಳ್ಳುಳ್ಳಿಗೆ ಜೇನುತುಪ್ಪವನ್ನು ಸೇರಿಸಿ ಜಗಿದು ತಿನ್ನಬೇಕು.
ವಸಡಿನಲ್ಲಿ ರಕ್ತಸ್ರಾವ ಕಾಣಿಸಿಕೊಂಡರೆ ದೇಹದಲ್ಲಿ ವಿಟಮಿನ್ ಸಿ ಕೊರತೆ ಇದೆ ಎಂದರ್ಥ. ಬೆಟ್ಟದ ನೆಲ್ಲಿಕಾಯಿ ಮತ್ತು ಹುಳಿ ಪದಾರ್ಥಗಳು, ಆಮ್ಲಗಳು ಹೆಚ್ಚಾಗಿ ಇರುವ ಹಣ್ಣುಗಳನ್ನು ಸೇವಿಸಬೇಕು. ದಿನಕ್ಕೆ ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನಬೇಕು.