alex Certify ವರ ರಸಗುಲ್ಲ ತಿನ್ನಿಸಲು ಮುಂದಾದಾಗ ಸಿಟ್ಟಿಗೆದ್ದ ವಧು ಮಾಡಿದ್ಲು ಈ ಕೆಲಸ; ವೈರಲ್‌ ಆಗಿದೆ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ ರಸಗುಲ್ಲ ತಿನ್ನಿಸಲು ಮುಂದಾದಾಗ ಸಿಟ್ಟಿಗೆದ್ದ ವಧು ಮಾಡಿದ್ಲು ಈ ಕೆಲಸ; ವೈರಲ್‌ ಆಗಿದೆ ವಿಡಿಯೋ….!

ದೇಶಾದ್ಯಂತ ಈಗ ಮದುವೆಯ ಸೀಸನ್. ಮದುವೆ ಸಮಾರಂಭಗಳಲ್ಲಿ ನಡೆಯುವ ಕೆಲವೊಂದು ಫನ್ನಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಈ ವೀಡಿಯೊಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು ಆಘಾತಕಾರಿಯಾಗಿವೆ. ಇಂಥದ್ದೇ ಶಾಕಿಂಗ್‌ ದೃಶ್ಯವೊಂದು ನೆಟ್ಟಿಗರನ್ನು ಕಂಗಾಲಾಗಿಸಿದೆ. ಈ ವೀಡಿಯೊದಲ್ಲಿ, ವಧು-ವರರು ಮದುವೆಯ ವೇದಿಕೆಯ ಮೇಲೆ ನಿಂತಿದ್ದಾರೆ.

ವರಮಾಲಾ ಕಾರ್ಯಕ್ರಮದ ಬಳಿಕ ವರ, ವಧುವಿಗೆ ಸಿಹಿ ತಿನ್ನಿಸಲು ಪ್ರಾರಂಭಿಸುತ್ತಾನೆ. ಆದರೆ ವಧು ಸಿಕ್ಕಾಪಟ್ಟೆ ಕೋಪದಲ್ಲಿದ್ಲು. ಆಕೆ ರಸಗುಲ್ಲ ತಿನ್ನಲು ನಿರಾಕರಿಸಿದ್ದಲ್ಲದೆ, ಅದನ್ನು ವರನ ಕೈಯಿಂದ ತೆಗೆದುಕೊಂಡು ಎಸೆದುಬಿಡ್ತಾಳೆ. ವಧುವಿನ ಈ ಅವತಾರ ನೋಡಿ ಎಲ್ಲರಿಗೂ ಶಾಕ್‌. ಕುಟುಂಬಸ್ಥರು ಕೂಡ ಆಘಾತಕ್ಕೊಳಗಾಗಿದ್ದಾರೆ. ವರನೇನೂ ಕಮ್ಮಿ ಆಸಾಮಿಯಲ್ಲ. ವಧು ಆತನಿಗೆ ನೀರು ಕುಡಿಸಲು ಬಂದಾಗ ಸಿಟ್ಟಿನಲ್ಲಿ ಅದನ್ನು ಚೆಲ್ಲಿಬಿಡ್ತಾನೆ.

ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ವಧು, ನೀರಿನ ಲೋಟವನ್ನು ಅತಿಥಿಗಳೆಡೆಗೆ ಎಸೆದಿದ್ದಾಳೆ. ಮದುವೆ ಮಂಟಪದಲ್ಲಿ ನಡೆದ ಈ ಘಟನೆ ವೈರಲ್‌ ಆಗಿದೆ. ಇದು ತಮಾಷೆ ಎನಿಸಿದರೂ, ಮದುವೆಯ ದಿನವೇ ಇಷ್ಟೊಂದು ಕಿತ್ತಾಡಿಕೊಳ್ತಿರೋ ದಂಪತಿ ಭವಿಷ್ಯದಲ್ಲಿ ಹೇಗಿರಬಹುದು ಅನ್ನೋ ಚಿಂತೆ ಅವರ ಕುಟುಂಬಸ್ಥರನ್ನು ಕಾಡಲಾರಂಭಿಸಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...