ಬೆಂಗಳೂರು- ಬಿಬಿಎಂಪಿ ಚುನಾವಣೆ ಯಾವಾಗ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಒಂದಲ್ಲ ಒಂದು ಕಾರಣದಿಂದ ಮುಂದೂಡಿಕೆಯಾಗ್ತಾ ಇದ್ದ ಬಿಬಿಎಂಪಿ ಚುನಾವಣೆಗೆ ಇದೀಗ ಮುಹೂರ್ತ ಕೂಡಿ ಬಂದಿದೆ. ಡಿಸೆಂಬರ್ 31 ರ ಒಳಗಾಗಿ ಚುನಾವಣೆ ನಡೆಸುವಂತೆ ಕೋರ್ಟ್ ಸೂಚನೆ ಕೊಟ್ಟಿದೆ.
ಹೊಸ ಮೀಸಲಾತಿ ಪಟ್ಟಿ ಪ್ರಕಟಕ್ಕೆ ಸರ್ಕಾರ 16 ವಾರಗಳ ಕಾಲಾವಕಾಶ ಕೋರಿತ್ತು. ಅಂದರೆ 4 ತಿಂಗಳ ಕಾಲಾವಕಾಶವನ್ನು ನೀಡುವಂತೆ ಪ್ರಮಾಣಪತ್ರ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಸರ್ಕಾರದ ಪ್ರಮಾಣಪತ್ರಕ್ಕೆ ಹೈಕೋರ್ಟ್ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು.
ಹೈಕೋರ್ಟ್ ಬಿಬಿಎಂಪಿ ವಾರ್ಡ್ ವಾರು ಮೀಸಲಾತಿ ಪಟ್ಟಿ ರದ್ದುಪಡಿಸಿದೆ. ಸರ್ಕಾರ ಒಬಿಸಿ ಆಯೋಗಕ್ಕೆ ಅಂಕಿ ಅಂಶ ಒದಗಿಸಬೇಕು. ನ.30 ರೊಳಗೆ ಮೀಸಲಾತಿ ಪ್ರಕಟಿಸಬೇಕು. ಡಿ.31 ರೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂದು ಆದೇಶವನ್ನು ಮಾಡಿದೆ. ಅಂದರೆ ಈ
ವರ್ಷದ ಅಂತ್ಯದ ಒಳಗೆ ಚುನಾವಣೆ ಮುಕ್ತಾಯಗೊಳಿಸಿ ಎಂದು ಸರ್ಕಾರಕ್ಕೆ ಡೆಡ್‍ಲೈನ್ ನೀಡಿದೆ.