ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗಲು ಸರ್ಕಾರಿ ಉದ್ಯೋಗಿಗಳು ರಾಜಕಾರಣಿಗಳ ಮೊರೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ರಾಜಕಾರಣಿಗಳಿಂದ ಶಿಫಾರಸ್ಸು ಪತ್ರ ಪಡೆಯುವುದು ಅಥವಾ ಫೋನ್ ಕರೆ ಮಾಡಿಸುವ ಮೂಲಕ ವರ್ಗಾವಣೆಗಾಗಿ ಒತ್ತಡ ಹೇರುತ್ತಾರೆ. ಇಂತಹ ಉದ್ಯೋಗಿಗಳಿಗೆ ಈಗ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ.
ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ವರ್ಗಾವಣೆಗಾಗಿ ರಾಜಕಾರಣಿಗಳ ಶಿಫಾರಸ್ಸು ಪತ್ರ ತೊಂದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಸರ್ಕಾರಿ ಸೇವೆಯಲ್ಲಿರುವವರು ನಿಷ್ಪಕ್ಷಪಾತ ಧೋರಣೆ ಹೊಂದಿರಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸಿಬ್ಬಂದಿ ಸಚಿವಾಲಯವು ಸುತ್ತೋಲೆ ಹೊರಡಿಸಿದ್ದು, ಹಲವು ಉದ್ಯೋಗಿಗಳು ವರ್ಗಾವಣೆಗಾಗಿ ಸಚಿವರು, ಲೋಕಸಭೆ ಅಥವಾ ರಾಜ್ಯಸಭಾ ಸದಸ್ಯರಿಂದ ಶಿಫಾರಸ್ಸು ಪತ್ರ ತರುತ್ತಾರೆ. ಆದರೆ ಇದು ಸಿಸಿಎಸ್ ಸೇವಾ ನಿಯಮ 20 ರ ಉಲ್ಲಂಘನೆ ಆಗುವ ಕಾರಣ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.