ಕೊರೊನಾ ವೈರಸ್ ಸೋಂಕಿನ ಕಾರಣ ಮಾನಸಿಕ ಒತ್ತಡದ ಮಟ್ಟ ಹೆಚ್ಚುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ವದಂತಿಗಳು ಜನರ ಕಳವಳವನ್ನು ಹೆಚ್ಚಿಸಿವೆ. ಭಯದಿಂದ ಖಿನ್ನತೆಯುಂಟಾಗುವ ಸಾಧ್ಯತೆಯಿದೆ.
ಮನೆಯ ನಾಲ್ಕು ಗೋಡೆಗಳ ಮಧ್ಯೆ ಒತ್ತಡವನ್ನು ಕಡಿಮೆ ಮಾಡಲು ಯೋಗ ಉತ್ತಮ ಮಾರ್ಗವಾಗಿದೆ. ಯೋಗದ ಕೆಲವು ಆಸನಗಳು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸುಲಭವಾದ ಮಾರ್ಗವೆಂದರೆ ಗರುಡಾಸನ. ಗರುಡಾಸನವನ್ನು ಈಗಲ್ ಪೋಸ್ ಎಂದು ಸಹ ಕರೆಯಲಾಗುತ್ತದೆ. ಮನೆಯಿಂದ ಕೆಲಸ ಮಾಡುತ್ತಿರುವ ಜನರಿಗೆ ಈ ಯೋಗ ಭಂಗಿಯು ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಅಭ್ಯಾಸ ಮಾಡುವುದರಿಂದ ಸೊಂಟ ಮತ್ತು ಭುಜಗಳ ಬಿಗಿತವನ್ನು ನಿವಾರಿಸಬಹುದು. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.
ಹೆಚ್ಚಿನ ಏಕಾಗ್ರತೆಗಾಗಿ ಬದ್ಧ ಕೋನಾಸನವನ್ನು ಅಭ್ಯಾಸ ಮಾಡುವುದು ಸೂಕ್ತ. ಬದ್ಧ ಕೊನಾಸಾನವನ್ನು ಕೊಬ್ಲರ್ ಪೋಸ್ ಎಂದೂ ಕರೆಯುತ್ತಾರೆ. ಈ ಆಸನವನ್ನು ಮಾಡುವುದರಿಂದ ಸೊಂಟ, ಮೊಣಕಾಲುಗಳ ನರಗಳು ಸಡಿಲಗೊಳ್ಳುತ್ತವೆ ಮತ್ತು ಮೆದುಳಿಗೆ ಏಕಾಗ್ರತೆ ಸಿಗುತ್ತದೆ.
ವರ್ಕ ಫ್ರಂ ಹೋಮ್ ಕೆಲಸದಿಂದಾಗಿ ಹೆಚ್ಚಿನ ಜನರು ಒಂದೇ ಸ್ಥಳದಲ್ಲಿ ಗಂಟೆಗಳ ಕಾಲ ಕುಳಿತಿದ್ದಾರೆ. ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಉಂಟಾಗುತ್ತದೆ. ಹಾಗಾಗಿ ಮಲಗುವ ಮುನ್ನ ಸುಪ್ತ ಕೋನಾಸನ ಸಾಕಷ್ಟು ಸಹಾಯ ಮಾಡುತ್ತದೆ. ಇದನ್ನು ಅಭ್ಯಾಸ ಮಾಡುವುದರಿಂದ ಕಾಲು ನೋವು ಮತ್ತು ಮಂಡಿನೋವು ಕಡಿಮೆಯಾಗುತ್ತದೆ. ದೇಹದ ಆಯಾಸ ಕೂಡ ಕಡಿಮೆಯಾಗುತ್ತದೆ.