alex Certify ವರ್ಕೌಟ್ ಮಾಡಿದ ತಕ್ಷಣ ಈ ಆಹಾರ ಸೆವಿಸ್ತೀರಾ….? ಹಾಗಾದ್ರೆ ಓದಿ ಈ ಸುದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಕೌಟ್ ಮಾಡಿದ ತಕ್ಷಣ ಈ ಆಹಾರ ಸೆವಿಸ್ತೀರಾ….? ಹಾಗಾದ್ರೆ ಓದಿ ಈ ಸುದ್ಧಿ

ದೇಹದ ಫಿಟ್ನೆಸ್‌ಗಾಗಿ ವರ್ಕೌಟ್ ಮಾಡುತ್ತೇವೆ. ಈ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಯುಕ್ತ ಆಹಾರಗಳು ಮುಖ್ಯ. ಹಾಗಂತ ವರ್ಕೌಟ್ ಮುಗಿಯಿತು ಅಂತ ಸಿಕ್ಕಿದ್ದನೆಲ್ಲಾ ತಿನ್ನಬಾರದು. ಬಾಡಿ ಫಿಟ್ ಅಂಡ್ ಶೇಪ್ ಆಗಿ ಕಾಣಬೇಕೆಂದರೆ ಕೆಲ ಆಹಾರಗಳನ್ನು ವರ್ಜಿಸಬೇಕು. ಯಾವ್ಯಾವ ಆಹಾರಗಳನ್ನು ಸೇವಿಸಬಾರದು ಅನ್ನುವ ಕುರಿತು ಇಲ್ಲಿದೆ ಮಾಹಿತಿ.ಹಸಿ ತರಕಾರಿ

ದೇಹದ ವರ್ಕೌಟ್ ಬಳಿಕ ಹಸಿ ತರಕಾರಿಗಳನ್ನು ತಿನ್ನದಿರಿ. ಆ ವೇಳೆಯಲ್ಲಿ ಹಸಿ ತರಕಾರಿಗಳಿಂದ ಪೌಷ್ಠಿಕಾಂಶಗಳು ಸಿಗುವುದಿಲ್ಲ. ಹೀಗಾಗಿ ವರ್ಕೌಟ್ ಆಗಿ ಕೆಲ ಗಂಟೆಗಳ ಬಳಿಕ ಹಸಿ ತರಕಾರಿ ಸೇವಿಸುವ ಅಭ್ಯಾಸ ಮಾಡುವುದು ಉತ್ತಮ.

ಹಣ್ಣಿನ ರಸ

ಹಣ್ಣಿಸ ರಸ ಉತ್ತಮ ಪಾನೀಯಗಳಲ್ಲಿ ಒಂದು. ಆದ್ರೆ ವರ್ಕೌಟ್ ಆದ ಬಳಿಕ ಹಣ್ಣಿನ ರಸ ಕುಡಿಯಬಾರದು. ಇದರಲ್ಲಿರುವ ಸಕ್ಕರೆ ಅಂಶ ದೇಹಕ್ಕೆ ಪರಿಣಾಮ ಬೀರಬಲ್ಲದ್ದು.

ಫ್ರೈಡ್ ಮೊಟ್ಟೆ

ಮೊಟ್ಟೆ ದೇಹಕ್ಕೆ ಉತ್ತಮ ಆಹಾರಗಳಲ್ಲಿ ಒಂದು. ಆದ್ರೆ ವರ್ಕೌಟ್ ಬಳಿಕ ಫ್ರೈಡ್ ಮೊಟ್ಟೆಯನ್ನು ಸೇವಿಸಬಾರದು. ಒಂದು ವೇಳೆ ಮೊಟ್ಟೆ ಸೇವಿಸಿದ್ರೆ ತೂಕ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಫ್ರೈಡ್ ಮಾಡಿರುವಂತಹ ಮೊಟ್ಟೆಯನ್ನು ಸೇವಿಸದೇ ಇರುವುದು ಉತ್ತಮ.

ಚಾಕಲೇಟ್

ಚಾಕಲೇಟ್ ಅನ್ನು ಸೇವಿಸುವುದರಿಂದ ಸ್ವಲ್ಪಮಟ್ಟಿಗೆ ಎನರ್ಜಿ ದೊರೆಯಬಹುದು. ಆದ್ರೆ ವರ್ಕೌಟ್ ಬಳಿಕ ಚಾಕಲೇಟ್ ಸೇವನೆ ಉತ್ತಮವಾದುದಲ್ಲ ಎಂದು ಅಧ್ಯಯನ ಹೇಳುತ್ತದೆ. ಚಾಕಲೇಟ್‌ಲ್ಲಿ ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಹಾಗೂ ಕ್ಯಾಲೋರಿ ಇರುವುದರಿಂದ ವರ್ಕೌಟ್ ಮೇಲೆ ಸಾಕಷ್ಟು ಪರಿಣಾಮ ಬೀರಬಲ್ಲದ್ದು. ಆದ್ದರಿಂದ ವರ್ಕೌಟ್ ಸಮಯದಲ್ಲಿ ಚಾಕಲೇಟ್ ಸೇವನೆ ಮಾಡದಿರಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...