ದೇಹ ಫಿಟ್ ಆಗಿ ಆರೋಗ್ಯವಾಗಿಡಲು ಕೆಲವರು ವರ್ಕೌಟ್ ಮಾಡುತ್ತಾರೆ. ಕೆಲವರು ತುಂಬಾ ಕಠಿಣವಾದ ವರ್ಕೌಟ್ ಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ತುಂಬಾ ಸುಸ್ತಾಗುತ್ತದೆ. ಹೃದಯದ ಬಡಿತ ಹೆಚ್ಚಾಗುತ್ತದೆ. ಉಸಿರು ವೇಗವಾಗುತ್ತದೆ. ಹಾಗಾಗಿ ಅಂತವರು ದೇಹಕ್ಕೆ ವಿಶ್ರಾಂತಿ ನೀಡಲು ಈ ಯೋಗ ಮಾಡಿ.
ಮಾರ್ಜಾರಿ ಆಸನ (ಬೆಕ್ಕಿನ ಭಂಗಿ): ಮೇಜಿನ ಸ್ಥಾನದಲ್ಲಿರಿ, ಬಲಗೈಯನ್ನು ಭುಜಕ್ಕೆ ಮತ್ತು ನೆಲಕ್ಕೆ ಸಮಾನಾಂತರವಾಗಿ ಇಟ್ಟುಕೊಂಡು ನಿಧಾನವಾಗಿ ಉಸಿರಾಡಿ. ನಿಮ್ಮ ಕಾಲನ್ನು ಹಿಂದೆ ಇಟ್ಟು ನೇರಗೊಳಿಸಿ ಮತ್ತು ಸೊಂಟದೊಂದಿಗೆ ಜೋಡಿಸಿ. ಕುತ್ತಿಗೆ ಮತ್ತು ತಲೆಯನ್ನು ಶಾಂತ ಸ್ಥಿತಿಯಲ್ಲಿರಿಸಿ. ನಿಮ್ಮ ಎಡ ಅಂಗೈ ಮತ್ತು ಬಲ ಮಂಡಿಯ ಮೇಲೆ ಸಮತೋಲನಗೊಳಿಸಿ. ಈ ಭಂಗಿಯಲ್ಲಿ 15 ಸೆಕೆಂಡುಗಳ ಕಾಲ ಇರಿ. ನಿಧಾನವಾಗಿ ಉಸಿರಾಡಿ.
ಸಂಭವನೀಯ ಕೊರೊನಾ 3 ನೇ ಅಲೆ ಎದುರಿಸಲು ಸಿದ್ಧತೆ; 18 ಸಾವಿರ ನರ್ಸ್ ಗಳಿಗೆ 1 ತಿಂಗಳು ತರಬೇತಿ
ಬಾಲಸಾನ (ಮಕ್ಕಳ ಭಂಗಿ ) : ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲನ್ನು ಸೊಂಟಕ್ಕಿಂತ ಅಂಗಲವಾಗಿಸಿ ಮುಂದಕ್ಕೆ ಬಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.