ಹಿಂದೆಲ್ಲಾ ಮದುವೆಯಲ್ಲಿ ಮದುಮಗಳು ಬಹಳ ನಾಚಿಕೆಯಿಂದ ತಲೆತಗ್ಗಿಸಿ ಕುಳಿತುಕೊಳ್ಳುತ್ತಿದ್ದಳು. ಇಂತಹ ದಿನಗಳು ಇಂದು ಮಾಯವಾಗಿದ್ದು, ತಮ್ಮ ಮದುವೆಯ ದಿನವನ್ನು ಸ್ಮರಣೀಯವನ್ನಾಗಿಸಲು ವಧು-ವರರು ಬಯಸುತ್ತಾರೆ. ಇದೀಗ ವರ ಮದುವೆ ಮಂಟಪಕ್ಕೆ ಪ್ರವೇಶಿಸುತ್ತಿದ್ದಂತೆ, ವಧು ಅದ್ಭುತವಾಗಿ ಕುಳಿತಲ್ಲೇ ಸೊಂಟ ಬಳುಕಿಸಿರುವ ವಿಡಿಯೋ ವೈರಲ್ ಆಗಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವೇದಿಕೆಯ ಮೇಲೆ ಮುಸುಕು ಹಾಕಿ ಅಲಂಕರಿಸಿದ ವಧು ತನ್ನ ಆಸನದಲ್ಲಿ ಕುಳಿತಿದ್ದಾಳೆ. ಈ ವೇಳೆ ವರ ವೇದಿಕೆಯತ್ತ ಪ್ರವೇಶಿಸುತ್ತಿದ್ದಂತೆ, ಸಂತೋಷದಿಂದ ಡಾನ್ಸ್ ಮಾಡಿದ್ದಾನೆ.
ವರ ನೃತ್ಯ ಮಾಡುವುದನ್ನು ಕಂಡ ವಧು ತನ್ನನ್ನು ತಾನೇ ತಡೆಯಲಾರದೆ ಜನಪ್ರಿಯ ಗೀತೆ ‘ಬನ್ನೋ ತೇರಾ ಸ್ವಾಗ್ಗರ್’ಗೆ ಉತ್ಸಾಹದಿಂದ ಕುಣಿದಿದ್ದಾಳೆ. ಉಲ್ಲಾಸದ ಜೋಡಿಯ ನೃತ್ಯವನ್ನು ಕಂಡು ಅತಿಥಿಗಳು ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದ್ದಾರೆ.
ವಿಟ್ಟಿ ವೆಡ್ಡಿಂಗ್ ಹೆಸರಿನ ಇನ್ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ವಧು-ವರನ ನೃತ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಪ್ರೀತಿ ಮತ್ತು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗ ತುಂಬಿದೆ.