ರಷ್ಯಾ ಉಕ್ರೇನ್ ಮೇಲೆ ದಂಡೆತ್ತಿ ಬಂದು ವಾರ ಕಳೆದಿದೆ. ಉಕ್ರೇನ್ ಇನ್ನೂ ಶರಣಾಗದೇ ಕೆಚ್ಚೆದೆಯಿಂದ ಹೋರಾಡುತ್ತಿರುವುದನ್ನು ಗಮನಿಸಿದ ರಷ್ಯಾ ರೊಚ್ಚಿಗೆದ್ದಿದೆ. ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ಭಯಾನಕ ದಾಳಿ ನಡೆಸಿದೆ.
ಇದ್ದಕ್ಕಿದ್ದಂತೆ ಕೀವ್ ನಲ್ಲಿ ಭಯಂಕರ ಸ್ಫೋಟವಾಗಿದೆ. ಈ ವೇಳೆ ವರದಿಗಾರ ಸುದ್ದಿ ನೇರಪ್ರಸಾರದಲ್ಲಿ ಮಾಹಿತಿ ನೀಡ್ತಾ ಇದ್ದ. ಲೈವ್ ನ್ಯೂಸ್ ನಲ್ಲಿ ಈ ಸ್ಫೋಟ ಗೋಚರಿಸಿದೆ. ಕೂಡಲೇ ವರದಿಗಾರ ಆಫ್ ಏರ್ ಆಗಿಬಿಟ್ಟಿದ್ದಾನೆ.
ಇದಕ್ಕೂ ಮುನ್ನ ನಡೆದ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಕೀವ್ ನಗರದಲ್ಲಿ ಸುಮಾರು 30 ಲಕ್ಷ ಜನರಿದ್ದು, ಪ್ರತಿಕ್ಷಣವೂ ಪ್ರಾಣಭಯದಲ್ಲೇ ಬದುಕುವಂತಾಗಿದೆ.
ಈಗಾಗ್ಲೇ ಉಕ್ರೇನ್ ನ ಖೆರ್ಸೊನ್ ನಗರವನ್ನು ವಶಪಡಿಸಿಕೊಂಡಿರೋ ರಷ್ಯಾ ಒಡೆಸ್ಸಾ ಸಿಟಿಯ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ ಉಕ್ರೇನ್ ನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ ನಲ್ಲಿ ರಷ್ಯಾ ಹಾಗೂ ಉಕ್ರೇನ್ ಪಡೆಗಳ ನಡುವೆ ತೀವ್ರ ಹೋರಾಟ ನಡೆಯುತ್ತಲೇ ಇದೆ.