ತಿರುವನಂತಪುರಂ: ದೇವರನಾಡು, ಸಾಕ್ಷರತಾ ರಾಜ್ಯ ಕೇರಳದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಇದರಿಂದ ಬೇಸರಗೊಂಡಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಹೆಣ್ಮಕ್ಕಳು ಬಲಿಯಾಗುತ್ತಿದ್ದು, ಈ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಪಾಲರು ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಂಜೆ 4 ಗಂಟೆಗೆ ರಾಜಭವನದಲ್ಲಿ ಖಾನ್ ತಮ್ಮ ಉಪವಾಸ ಅಂತ್ಯಗೊಳಿಸಲಿದ್ದಾರೆ. ಬಳಿಕ ಗಾಂಧಿಭವನದಲ್ಲಿ ಪ್ರತಿಭಟನಾಕಾರರ ಜತೆ ಸೇರಿ ಧರಣಿ ನಡೆಸಲಿದ್ದಾರೆ.
BIG BREAKING: ಚಲಿಸುತ್ತಿದ್ದ ಬಸ್ ನಲ್ಲಿ ಸ್ಫೋಟ; 13 ಪ್ರಯಾಣಿಕರ ದುರ್ಮರಣ
ಕಳೆದ ತಿಂಗಳಷ್ಟೇ ವರದಕ್ಷಿಣೆ ವಿರೋಧಿ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ರಾಜ್ಯಪಾಲರು ವಾಗ್ದಾನ ಮಾಡಿದ್ದರು. ಕಳೆದ ತಿಂಗಳು ವರದಕ್ಷಿಣೆ ಪಿಡುಗಿಗೆ ವೈದ್ಯೆಯೊಬ್ಬರು ಬಲಿಯಾಗಿದ್ದ ಸುದ್ದಿ ರಾಷ್ಟ್ರದಾದ್ಯಂತ ಭಾರಿ ತಲ್ಲಣ ಮೂಡಿಸಿತ್ತು. ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾದ ಬಳಿಕ ಆರಿಫ್ ಮೊಹಮ್ಮದ್ ಖಾನ್ ಈ ಹೇಳಿಕೆ ನೀಡಿದ್ದರು.
ಅಲ್ಲದೆ ಕೇರಳದಲ್ಲಿ ಗಾಂಧಿ ತತ್ವ ಅನುಸರಿಸುವ ಹಲವು ಸಂಘಟನೆಗಳು ಜಾಗೃತಿ ಮೂಡಿಸಲು ಉಪವಾಸ ಸತ್ಯಾಗ್ರಹ ಆಯೋಜಿಸಿವೆ.