ವಯಸ್ಸು 40 ದಾಟಿದ ನಂತರ ಸಹಜವಾಗಿಯೇ ಮೂಳೆಗಳು ದುರ್ಬಲವಾಗುತ್ತವೆ. ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಮೂಳೆಗಳ ದೌರ್ಬಲ್ಯದಿಂದಾಗಿ, ನಮ್ಮ ದೈನಂದಿನ ಜೀವನದ ಅಗತ್ಯ ಕೆಲಸಗಳನ್ನು ಮಾಡಲು ಕೆಲವೊಮ್ಮೆ ಕಷ್ಟವಾಗಬಹುದು.
ಆದ್ದರಿಂದ ಮೂಳೆಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ದುರ್ಬಲ ಮೂಳೆಗಳ ಸಮಸ್ಯೆಗೆ ಅನೇಕ ಬಾರಿ ನಮ್ಮ ಕೆಲವೊಂದು ಕೆಟ್ಟ ಅಭ್ಯಾಸಗಳೇ ಕಾರಣವಾಗುತ್ತವೆ. ಇದರಿಂದ ಸಕ್ಕರೆ ಕಾಯಿಲೆ ಕೂಡ ಬರಬಹುದು.
ಹಾಗಾಗಿ ಮೊದಲು ಆರೋಗ್ಯಕರ ಆಹಾರವನ್ನು ಸೇವಿಸಬೇಕು.40 ವರ್ಷ ವಯಸ್ಸಿನ ನಂತರವೂ ಮೂಳೆಗಳು ಬಲವಾಗಿರಬೇಕೆಂದು ನೀವು ಬಯಸಿದರೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಪೋಷಕಾಂಶ ಆಧಾರಿತ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಹಾಲು ಮತ್ತು ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪು, ತರಕಾರಿಗಳು, ಓಟ್ಸ್, ಅಕ್ಕಿ, ಮಸೂರ್ ದಾಲ್, ಕಾಳುಗಳು, ಹಣ್ಣು, ಕ್ಯಾರೆಟ್, ಬಟಾಣಿ, ಫಾಕ್ಸ್ ನಟ್, ಸಲಾಡ್, ಡ್ರೈಫ್ರೂಟ್ಸ್, ಮೊಟ್ಟೆ, ಗೆಣಸು, ಅಣಬೆ, ಮೂಲಂಗಿ ಇವನ್ನೆಲ್ಲ ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.
ಈ ವಿಷಯಗಳಿಗೆ ಗಮನ ಕೊಡಿ
ಊಟದ ಸಮಯದಲ್ಲಿ ಮಾತ್ರ ಹಸಿ ಸಲಾಡ್ ಅನ್ನು ತಿನ್ನಬೇಕು. ಇದರಿಂದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ದಿನಕ್ಕೆ ಎರಡು ಬಾರಿ ಹಾಲು ಕುಡಿಯಬೇಕು, ಏಕೆಂದರೆ ಇದು ಕ್ಯಾಲ್ಸಿಯಂ ಸಮೃದ್ಧವಾಗಿರುವ ಸೂಪರ್‌ಫುಡ್.
ಹಾಲು ಇಷ್ಟವಾಗದಿದ್ದರೆ, ನಿಯಮಿತವಾಗಿ ಬೇಳೆಕಾಳುಗಳನ್ನು ತಿನ್ನಿರಿ. ಮೊಟ್ಟೆ ಮತ್ತು ಇತರ ಮಾಂಸಾಹಾರಿ ಪದಾರ್ಥಗಳನ್ನು ತಿನ್ನುವುದರಿಂದ ಮೂಳೆಗಳಿಗೆ ಪ್ರಯೋಜನವಾಗುತ್ತದೆ. ದಿನಕ್ಕೆ ಸುಮಾರು 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಬಯಸಿದರೆ ರಸಭರಿತವಾದ ಹಣ್ಣಿನ ರಸವನ್ನು ಸಹ ಕುಡಿಯಬಹುದು. ಪ್ರತಿದಿನ ಕನಿಷ್ಠ ಅರ್ಧ ಘಂಟೆ ನಡೆಯಿರಿ ಅಥವಾ ಭಾರವಾದ ವ್ಯಾಯಾಮಗಳನ್ನು ಮಾಡಿ.