30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ ಕ್ಯಾನ್ಸರ್ ನಂತ ಖಾಯಿಲೆಗಳು ಮಹಿಳೆಯರನ್ನು ಆವರಿಸುತ್ತವೆ.
30ರ ನಂತ್ರ ಬ್ರೆಸ್ಟ್ ಕ್ಯಾನ್ಸರ್ ಮಹಿಳೆಯರನ್ನು ಹೆಚ್ಚು ಕಾಡುತ್ತದೆ ಎಂದು ಅಮೆರಿಕಾ ಕ್ಯಾನ್ಸರ್ ಸೊಸೈಟಿ ಹೇಳಿದೆ. ತೂಕ ಏರಿಕೆಯಿಂದ ಗರ್ಭಕೋಶ, ಮೂತ್ರಕೋಶ, ಹೊಟ್ಟೆಯಲ್ಲಿ ಕೂಡ ಕ್ಯಾನ್ಸರ್ ಗಡ್ಡೆ ಬೆಳೆಯುವ ಸಾಧ್ಯತೆಗಳಿರುತ್ತವೆ.
ಹೆಚ್ಚಿನ ಭಾರತೀಯ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ. ಸಣ್ಣ-ಪುಟ್ಟ ಸಮಸ್ಯೆ ಕಂಡು ಬಂದಲ್ಲಿ ಅದರ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಆರಂಭದಲ್ಲಿಯೇ ಕ್ಯಾನ್ಸರ್ ಬಗ್ಗೆ ತಿಳಿದಲ್ಲಿ ಅದನ್ನು ಸುಲಭವಾಗಿ ಗುಣಪಡಿಸಬಹುದು. ಆದ್ರೆ ಮೂರು, ನಾಲ್ಕು ಸ್ಟೇಜ್ ವರೆಗೂ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದೇ ಇಲ್ಲ.
30 ರ ನಂತ್ರ ನಿಯಮಿತ ರೂಪದಲ್ಲಿ ರಕ್ತ, ಮೂತ್ರ ಸೇರಿದಂತೆ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು. ಸಣ್ಣ-ಪುಟ್ಟ ಸಮಸ್ಯೆ ಕಂಡು ಬಂದರೆ ಅದನ್ನು ನಿರ್ಲಕ್ಷಿಸದೆ ವೈದ್ಯರ ಬಳಿ ಹೋಗಬೇಕು. ಆರಂಭದಲ್ಲಿಯೇ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಿ ಎನ್ನುತ್ತದೆ ವೈದ್ಯಲೋಕ.