ವಯಸ್ಸು 19 ವರ್ಷ ಆಗಿದ್ದರೂ ಕೂಡ ಈಕೆ ಸಣ್ಣ ಬಾಲಕಿಯಂತೆ ಕಾಣುತ್ತಾಳೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಾಗ್ಪುರದ ಯುವತಿಯ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಈಕೆ ಕೇವಲ ಕೇವಲ 3 ಅಡಿ 4 ಇಂಚಷ್ಟು ಮಾತ್ರ ಎತ್ತರವಿದ್ದಾಳೆ.
ವರದಿಯ ಪ್ರಕಾರ, ಅಬೋಲಿ ಮಗುವಾಗಿದ್ದಾಗ ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದಳು. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಮತ್ತು ಮೂಳೆಗಳ ವಿರೂಪತೆಯನ್ನು ಸಂಯೋಜಿಸುವ ಸಿಂಡ್ರೋಮ್ ನಿಂದ, ಅಬೋಲಿಯ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ.
ಹುಟ್ಟುವಾಗಲೇ ಅಬೋಲಿಗೆ ಮೂತ್ರಕೋಶವಿಲ್ಲ. ಆದ್ದರಿಂದ ಆಕೆ ಯಾವಾಗಲೂ ಡೈಪರ್ ಅನ್ನು ಧರಿಸಬೇಕಾಗುತ್ತದೆ. ರೋಗ ಪತ್ತೆಯಾದ ನಂತರ, ಮೂತ್ರವು ಅವಳ ದೇಹದಲ್ಲಿ ಸಂಗ್ರಹವಾಗದಂತೆ ವೈದ್ಯರು ಅವಳ ಸೊಂಟದಲ್ಲಿ ರಂಧ್ರ ಮಾಡಬೇಕಾಯಿತು. ಹೀಗಾಗಿ ಆಕೆ ಸೊಂಟದ ಮೂಲಕ ಮೂತ್ರ ಮಾಡಬೇಕಿದೆ. ಇದಲ್ಲದೆ, ಆಕೆಯ ಕುಂಠಿತ ಬೆಳವಣಿಗೆಯಿಂದಾಗಿ ನಡೆಯಲು ಕೂಡ ಕಷ್ಟವಾಗಿದೆ. ಹೀಗಾಗಿ ಆಕೆ ಗಾಲಿಕುರ್ಚಿಯಲ್ಲೇ ಕಾಲಕಳೆಯುವಂತಾಗಿದೆ.
ತನ್ನ ದೈನಂದಿನ ಹೋರಾಟಗಳ ಜೊತೆಗೆ, ತನ್ನ ಸಣ್ಣ ನಿಲುವನ್ನು ಆನ್‌ಲೈನ್‌ನಲ್ಲಿ ಕೆಲವರು ಟ್ರೋಲ್ ಮಾಡುತ್ತಾರೆ ಅಂತಾ ಅಬೋಲಿ ಹೇಳಿದ್ದಾರೆ. ಆದರೆ, ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಅಬೋಲಿ ತನ್ನ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಆಕೆ ಮಹತ್ವಾಕಾಂಕ್ಷಿ ಮಾಡೆಲ್ ಮತ್ತು ಗಾಯಕಿಯಾಗುವ ಹಂಬಲವನ್ನು ಹೊಂದಿದ್ದಾಳೆ. ಅಬೋಲಿ ಬಾಲ್ಯದಲ್ಲಿ ಹಾಡು ಮತ್ತು ನೃತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದಳು. ಆದರೆ ಅವಳ ಸ್ಥಿತಿಯು ಮುಂದುವರೆದಂತೆ, ಅವಳು ನಡೆಯಲು ಸಹ ಸಾಧ್ಯವಾಗಲಿಲ್ಲ.
ಅಬೋಲಿ ಪ್ರಸಿದ್ಧ ನಟಿಯಾಗುವತ್ತ ದೃಷ್ಟಿ ನೆಟ್ಟಿದ್ದಾಳೆ. ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದಾಳೆ. ಆಕೆಯ ಸ್ಥಿತಿಯನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರೂ, ಅಬೋಲಿ ತನ್ನ ಭವಿಷ್ಯದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾಳೆ.