alex Certify ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಪಾಲಕರು ಮಿಸ್‌ ಮಾಡದೆ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಪಾಲಕರು ಮಿಸ್‌ ಮಾಡದೆ ಓದಿ ಈ ಸುದ್ದಿ

ಪಾಲಕರು ಮಕ್ಕಳ ಬಾಳು ಸುಖವಾಗಿರಲೆಂದು ಬಯಸ್ತಾರೆ. ಹೆಣ್ಣು ಮಕ್ಕಳಿಗೆ ಪ್ರೀತಿ ನೀಡುವ ಶ್ರೀಮಂತ ಪತಿ ಸಿಗಲಿ ಎಂಬುದು ಎಲ್ಲ ತಂದೆ – ತಾಯಂದಿರ ಬಯಕೆ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ ಹೆಣ್ಣು ಮಕ್ಕಳ ಪಾಲಕರೂ ಮಗಳಿಗಾಗಿ ನಗರದಲ್ಲಿರುವ ಹುಡುಗನ ಹುಡುಕಾಟ ನಡೆಸ್ತಾರೆ. ಅದ್ರಲ್ಲೂ ಅನಿವಾಸಿ ಭಾರತೀಯ ಹುಡುಗರಿಗೆ ಬೇಡಿಕೆ ಹೆಚ್ಚಾಗಿರುತ್ತೆ.

ಎನ್.‌ಆರ್‌.ಐ. ಹುಡುಗರ ಬಗ್ಗೆ ಪೂರ್ವಾಪರ ವಿಚಾರ ಮಾಡದೆ ಕಣ್ಣು ಮುಚ್ಚಿ ಮಗಳನ್ನು ಕೊಡಲು ಪಾಲಕರು ಸಿದ್ಧರಾಗ್ತಾರೆ. ನೀವೂ ಎನ್.‌ಆರ್‌.ಐ. ಹುಡುಗನನ್ನು ಮಗಳಿಗೆ ಹುಡುಕುತ್ತಿದ್ದರೆ ಇದನ್ನು ಅವಶ್ಯವಾಗಿ ಓದಿ.

ಈ ಹಿಂದೆ ವಿದೇಶಾಂಗ ಸಚಿವಾಲಯ ಆಘಾತಕಾರಿ ವಿಷ್ಯವನ್ನು ಜನರ ಮುಂದಿಟ್ಟಿತ್ತು. ವಿದೇಶಾಂಗ ಸಚಿವಾಲಯದ ವರದಿ ಪ್ರಕಾರ, ಪ್ರತಿ ಎಂಟು ಗಂಟೆಗೆ ಭಾರತೀಯ ಮಗಳೊಬ್ಬಳು ಸಹಾಯಕ್ಕಾಗಿ ಪೋಷಕರಿಗೆ ಕರೆ ಮಾಡುತ್ತಿದ್ದಳಂತೆ. ಎನ್.‌ಆರ್‌.ಐ. ಗಂಡಂದಿರ ದಬ್ಬಾಳಿಕೆ, ದೈಹಿಕ ಕಿರುಕುಳಕ್ಕೆ ಬೇಸತ್ತು ಹೆಣ್ಣು ಮಗಳು ಪಾಲಕರಿಗೆ ಕರೆ ಮಾಡುತ್ತಿದ್ದಳೆಂದು ವರದಿಯಲ್ಲಿ ಹೇಳಲಾಗಿದೆ.

ಜನವರಿ 1,2015 ರಿಂದ ನವೆಂಬರ್ 30,2017 ರೊಳಗೆ ವಿದೇಶಾಂಗ ಸಚಿವಾಲಯಕ್ಕೆ 3328 ದೂರುಗಳು ಬಂದಿದ್ದವಂತೆ. ಇದ್ರ ಪ್ರಕಾರ ಬೆಳಿಗ್ಗೆ ಮೂರರಿಂದ ನಾಲ್ಕು ಬಾರಿ ಹಾಗೂ ರಾತ್ರಿ ಒಂದು ಬಾರಿ ಹೆಣ್ಣು ಮಕ್ಕಳು ಕರೆ ಮಾಡಿದ್ದಾರೆ. ಅದ್ರಲ್ಲಿ ಗುಜರಾತ್, ಆಂಧ್ರ-ತೆಲಂಗಾಣ ಹಾಗೂ ಪಂಜಾಬ್ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿಯಿತ್ತಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...