ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ 20 ದಶಕ ಅನ್ನೋದು ಮ್ಯಾಜಿಕಲ್ ಕಾಲ. ತನ್ನ ಕನಸನ್ನು ನನಸು ಮಾಡಿಕೊಳ್ಳೋದ್ರಲ್ಲಿ ಮಿಂಚಿನಂತೆ 20-29 ವರ್ಷಗಳು ಕಳೆದುಹೋಗಿಬಿಟ್ಟಿರುತ್ತೆ. ಆದರೆ ಮೂವತ್ತು ಶುರುವಾಯ್ತಲ್ಲ ಅಂತ ಯಾರೂ ಕೂಡ ಚಿಂತಿಸಬೇಕಿಲ್ಲ. ಅದಕ್ಕೆ ಕಾರಣಗಳು ಇಲ್ಲಿವೆ.
29 ಕಳೆಯುವ ಹೊತ್ತಿಗೆ ಮೊದಲಿಗಿಂತ ಬುದ್ಧಿವಂತರಾಗಿರುತ್ತೀರಿ. ಯಾವುದು ಸರಿಯಾದದ್ದು ಅನ್ನೋದ್ರ ಬಗ್ಗೆ ಸ್ಪಷ್ಟತೆ ನಿಮ್ಮಲ್ಲಿರುತ್ತದೆ.
ನಿಮ್ಮ ದಾರಿಯಲ್ಲಿ ನೀವು ಇನ್ನಷ್ಟು ಆರಾಮದಾಯಕವಾಗಿರುತ್ತೀರಿ. ಎಲ್ಲದಕ್ಕೂ ನಿಮಗೆ ಉತ್ತರ ಸಿಗುತ್ತೆ. 20 ದಶಕ ಎಂದರೆ ಅದು ಬರೀ ಪ್ರಶ್ನೆಗಳ ಕಾಲವಾಗಿರುತ್ತೆ ಮತ್ತು ನಿಮಗೆ ಉತ್ತರಗಳೇ ಸಿಕ್ಕಿರುವುದಿಲ್ಲ.
30 ವಯಸ್ಸಿನ ನಂತರ ನಿಜವಾಗಿಯೂ ನಿಮಗೆ ನಿಮ್ಮವರು ಯಾರೆಂದು ತಿಳಿಯುತ್ತದೆ.
ಯಾವುದೇ ಕ್ಲಿಷ್ಟಕರ ಪರಿಸ್ಥಿತಿಯನ್ನು ಸಹ ಸರಿಯಾಗಿ ನಿಭಾಯಿಸಲು ಕಲಿತಿರುತ್ತೀರಿ.
ಯಾವಾಗ ಯಾವುದನ್ನು ಕೇಳಬಾರದು ಎಂಬುದರ ಬಗ್ಗೆ ಸ್ಪಷ್ಟತೆ ಬಂದಿರುತ್ತದೆ. ಜನ ಏನೆಂದುಕೊಳ್ಳುತ್ತಾರೆ ಅನ್ನೋದ್ರ ಬಗ್ಗೆ ತಲೆಕೆಡಿಸಿಕೊಳ್ಳದ ಮನಃಸ್ಥಿತಿ ಬಂದಿರುತ್ತೆ.
ನೀವು ಎಲ್ಲವನ್ನೂ ನಿಭಾಯಿಸುತ್ತೀರಿ. ಅದು ಆರ್ಥಿಕವಾಗಿಯೇ ಇರಬಹುದು ಅಥವಾ ಮಾನಸಿಕವಾಗಿಯೇ ಇರಬಹುದು.
ಮೂವತ್ತಾದ ಬಳಿಕ ನೀವು ಸಾಮಾಜಿಕವಾಗಿ ಹೆಚ್ಚೆಚ್ಚು ಜಾಗೃತರಾಗುತ್ತೀರಿ. ಯಾವುದು ಸರಿ/ತಪ್ಪು ಅನ್ನೋದ್ರ ಬಗ್ಗೆ ಹೆಚ್ಚು ಗಮನ ವಹಿಸುತ್ತೀರಿ.
30 ವರ್ಷಗಳ ಅನುಭವದ ಬಳಿಕ ನಿಮಗೆ ಯಾವುದು ಮಹತ್ವ ಅನ್ನೋದು ಅರಿವಾಗುತ್ತದೆ. ಪ್ರೀತಿ, ಮದುವೆ, ಬಾಂಧವ್ಯಗಳ ಬಗ್ಗೆ ನಿಲುವು ಸ್ಪಷ್ವವಾಗುತ್ತದೆ.
30 ರ ಬಳಿಕ ನಿಮ್ಮ ಪೋಷಕರನ್ನು ಅಥವಾ ಹಿರಿಯರನ್ನೂ ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ.
30 ರ ತನಕ ಜೀವನದಲ್ಲಿ ಪಟ್ಟ ಶ್ರಮದ ಬಳಿಕ ಮುಂದಿನ 10 ವರ್ಷ ನಿಮಗೆ ಸಾಕಷ್ಟು ಮೋಜನ್ನು, ಸಂತೋಷವನ್ನು ನೀಡುತ್ತೆ.