ವಯಸ್ಸು ಹೆಚ್ಚಾಗ್ತಿದ್ದಂತೆ ಅನೇಕ ವಿಷ್ಯಗಳ ಮೇಲಿರುವ ಆಸಕ್ತಿ ಕಡಿಮೆಯಾಗ್ತಾ ಹೋಗುತ್ತೆ. ಅದ್ರಲ್ಲಿ ಶಾರೀರಿಕ ಸಂಬಂಧ ಕೂಡ ಒಂದು. ಸಾಮಾನ್ಯವಾಗಿ ವಯಸ್ಸು 50ರ ಗಡಿ ದಾಟುತ್ತಿದ್ದಂತೆ ಮನಸ್ಸು ಹೇಳಿದಂತೆ ಶರೀರ ಕೇಳುವುದಿಲ್ಲ. ಮಹಿಳೆಯರಿಗೂ ಅನೇಕ ಸಮಸ್ಯೆಗಳು ಕಾಡುವುದರಿಂದ ನಿಧಾನವಾಗಿ ಲೈಂಗಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ.
ಮಹಿಳೆಯರಿಗೆ ಸಾಮಾನ್ಯವಾಗಿ 40-45 ವರ್ಷದೊಳಗೆ ಮುಟ್ಟು ಬಿಡುತ್ತದೆ. ಈ ವೇಳೆ ಅವರಿಗೆ ಸೆಕ್ಸ್ ಸಂಬಂಧಿ ಹಾಗೂ ಯೋನಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಶರೀರ ಶಕ್ತಿ ಕಳೆದುಕೊಳ್ಳುತ್ತ ಬರುತ್ತದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಿರಿಕಿರಿ ಅನುಭವಿಸುತ್ತಾರೆ ಮಹಿಳೆಯರು. ಶೀಘ್ರ ಪತನ ಕಾರಣದಿಂದಾಗಿಯೂ ಮಹಿಳೆಯರು ಶಾರೀರಿಕ ಸಂಬಂಧ ಬೆಳೆಸಲು ಆಸಕ್ತಿ ತೋರುವುದಿಲ್ಲ.
ಇನ್ನು ಪುರುಷರೂ ಲೈಂಗಿಕ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ವಯಸ್ಸಾದಂತೆ ಅನಾರೋಗ್ಯ ಕೆಲವರನ್ನು ಕಾಡಿದ್ರೆ ಮತ್ತೆ ಕೆಲವರಿಗೆ ಶಾರೀರಿಕ ಸಂಬಂಧ ಬೆಳೆಸುವ ಮನಸ್ಸಿರುತ್ತೆ. ಆದ್ರೆ ಶಕ್ತಿ ಕೊರತೆ ಎದುರಾಗುತ್ತದೆ. ಶೀಘ್ರ ಪತನ ಅವರನ್ನು ಕಾಡುವ ಇನ್ನೊಂದು ಸಮಸ್ಯೆ. ಆರಂಭದಲ್ಲಿ ರಾತ್ರಿ ಎರಡು-ಮೂರು ಬಾರಿ ಶಾರೀರಿಕ ಸಂಬಂಧ ಬೆಳೆಸುವಷ್ಟು ಶಕ್ತಿ ಹೊಂದಿದ್ದ ಪುರುಷರು ಈಗ ವಾರಕ್ಕೊಮ್ಮೆ, ತಿಂಗಳಿಗೊಮ್ಮೆಯೂ ಅಸಾಧ್ಯ ಎನ್ನುತ್ತಾರೆ.
ಪತಿ-ಪತ್ನಿ ನಡುವೆ ಮೊದಲಿನಷ್ಟು ಆಸಕ್ತಿ, ಉತ್ಸಾಹ ಇಲ್ಲದಿರುವುದು. ಪತ್ನಿಗೆ ಸಂಬಂಧ ಬೆಳೆಸುವ ಮನಸ್ಸಿದ್ದಾಗ ಪತಿಗೆ ಇರುವುದಿಲ್ಲ. ಪತಿಗೆ ಮನಸ್ಸಿದ್ದಾಗ ಪತ್ನಿ ಒಲ್ಲೆ ಎನ್ನುತ್ತಾಳೆ. ಮತ್ತೆ ಕೆಲವರಿಗೆ ರಾತ್ರಿ ಶಾರೀರಿಕ ಸಂಬಂಧ ಬೆಳೆಸಲು ಇಷ್ಟವಿರುವುದಿಲ್ಲ. ಆದ್ರೆ ಹಗಲಿನಲ್ಲಿ ಇದು ಅಸಾಧ್ಯ. ಹೀಗೆ ನಾನಾ ಕಾರಣಗಳ ಜೊತೆಗೆ ವಯಸ್ಸಿನ ಏರಿಕೆಯಿಂದಾಗುವ ಹಾರ್ಮೋನ್ ಗಳ ಬದಲಾವಣೆ ವಯಸ್ಸಾದಂತೆ ಶಾರೀರಿಕ ಸಂಬಂಧ ಬೆಳೆಸುವ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.