alex Certify ವಯಸ್ಸಾದಂತೆ ಮಹಿಳೆಯರ ಸ್ತನಗಳ ಸಡಿಲತೆ ಸಮಸ್ಯೆ, ಅಸಲಿ ಕಾರಣ ಪತ್ತೆ ಮಾಡಿದ್ದಾರೆ ಸಂಶೋಧಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾದಂತೆ ಮಹಿಳೆಯರ ಸ್ತನಗಳ ಸಡಿಲತೆ ಸಮಸ್ಯೆ, ಅಸಲಿ ಕಾರಣ ಪತ್ತೆ ಮಾಡಿದ್ದಾರೆ ಸಂಶೋಧಕರು….!

ಮಹಿಳೆಯರು ಸಾಮಾನ್ಯವಾಗಿ ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಸುಂದರವಾದ ಸ್ಟೈಲಿಶ್ ಮತ್ತು ಪರ್ಫೆಕ್ಟ್ ಫಿಗರ್ ಪಡೆಯಲು ಕಸರತ್ತು ಮಾಡ್ತಾರೆ. ಆದರೆ ವಯಸ್ಸು ಹೆಚ್ಚಾದಂತೆ ತ್ವಚೆಯಲ್ಲಿ ಮಾತ್ರವಲ್ಲದೇ ದೇಹದಲ್ಲೂ ಹಲವು ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳಲ್ಲೊಂದು ಸ್ತನಗಳ ಸಡಿಲತೆ.

ಇದು ಸಂಭವಿಸಿದಲ್ಲಿ ಯಾವುದೇ ಅಪಾಯವಿಲ್ಲ, ಆದರೆ ಮಹಿಳೆಯರ ಆತ್ಮವಿಶ್ವಾಸವನ್ನು ಬಹುಪಾಲು ತಗ್ಗಿಸಬಹುದು. ಈ ರೀತಿ ಸ್ತನ ಸಡಿಲತೆ ಅಥವಾ ಸ್ತನ ಕುಗ್ಗಲು ಕಾರಣವೇನು ಎಂಬುದನ್ನು ತಿಳಿಯೋಣ.

ಸ್ತನ ಸಡಿಲತೆ ಬಳಿಕ ಅನೇಕರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮರುನಿರ್ಮಾಣಕ್ಕೂ ಮುಂದಾಗುತ್ತಾರೆ. ಈ ರೀತಿ ಶಸ್ತ್ರಚಿಕಿತ್ಸೆಗಾಗಿ ಬಂದಿದ್ದ 132 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಮಹಿಳೆಯರಲ್ಲಿ ಸ್ತನಗಳ ಕುಗ್ಗುವಿಕೆಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಪತ್ತೆ ಮಾಡಲಾಗಿದೆ. ತೂಕ ನಷ್ಟ, ಗರ್ಭಾವಸ್ಥೆಯ ಸಂಖ್ಯೆ, ಧೂಮಪಾನ ಸ್ತನಗಳನ್ನು ಕುಗ್ಗಿಸಲು ಕಾರಣವಾಗಿದೆ.

ಇದರ ಹೊರತಾಗಿ ಸ್ತನ್ಯಪಾನ, ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಮತ್ತು ವ್ಯಾಯಾಮದ ಕೊರತೆಯಿಂದಲೂ ಇದು ಸಂಭವಿಸಬಹುದು. ಮಗುವಿಗೆ ಹಾಲುಣಿಸುವ ಸಮಯದಲ್ಲಿ ಸ್ತನಗಳಲ್ಲಿ ಸಡಿಲತೆ ಇರುವುದು ಸಹಜ. ಏಕೆಂದರೆ ಈ ಸಮಯದಲ್ಲಿ ಸ್ತನಗಳಲ್ಲಿರುವ ಜೀವಕೋಶಗಳು ಕುಗ್ಗಲು ಪ್ರಾರಂಭಿಸುತ್ತವೆ. ಇದು ಸ್ತನದ ಗಾತ್ರದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ.

ಹೆಚ್ಚು ಧೂಮಪಾನ ಮಾಡುವವರ ದೇಹದಲ್ಲಿ ಕಾಲಜನ್ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕಾಲಜನ್ ಕಡಿಮೆಯಾದಾಗ ದೇಹದ ಭಾಗಗಳಲ್ಲಿ ಸುಕ್ಕುಗಳು ಮೂಡುತ್ತವೆ. ಅದರ ಪರಿಣಾಮ ಸ್ತನಗಳ ಮೇಲೂ ಕಂಡುಬರುತ್ತದೆ. ವಯಸ್ಸಾದಂತೆ ನಮ್ಮ ದೇಹವು ಮೊದಲಿಗಿಂತ ಕಡಿಮೆ ಈಸ್ಟ್ರೊಜೆನ್ ಅನ್ನು ಉತ್ಪಾದಿಸುತ್ತದೆ, ಇದರಿಂದಾಗಿ ಸ್ತನಗಳು ಕುಗ್ಗುತ್ತವೆ.

ಸ್ತನ ಸಡಿಲತೆಗೆ ಚಿಕಿತ್ಸೆ ಏನು?

ವ್ಯಾಯಾಮದ ಮೂಲಕವೂ ಸ್ತನಗಳ ಸಡಿಲತೆಯನ್ನು ಸರಿಪಡಿಸಬಹುದು. ಸ್ತನಗಳ ಸ್ನಾಯುಗಳನ್ನು ಬಿಗಿಗೊಳಿಸಲು ಸ್ಕ್ವಾಟ್‌ ಸೇರಿದಂತೆ ಹೆಚ್ಚಿನ ತೀವ್ರತೆಯ ವ್ಯಾಯಾಮಗಳನ್ನು ಮಾಡಬಹುದು. ಸ್ತನಛೇದನವು, ಸ್ತನದ ಸಂಪೂರ್ಣ ಅಥವಾ ಭಾಗವನ್ನು ತೆಗೆದುಹಾಕುವುದನ್ನು ಒಳಗೊಂಡಿರುವ ಒಂದು ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಆದರೆ ವೈದ್ಯರು ಇದನ್ನು ಶಿಫಾರಸು ಮಾಡುವುದಿಲ್ಲ. ಸ್ತನಛೇದನದ ಸಮಯದಲ್ಲಿ, ಮೊಲೆತೊಟ್ಟು ಎದೆಯ ಮೇಲೆ ಸ್ಥಳಾಂತರಗೊಳ್ಳಬಹುದು, ರಕ್ತದ ನಷ್ಟ ಸಂಭವಿಸಬಹುದು ಮತ್ತು ಅಂಗಾಂಶ ಸಾಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...