alex Certify ವಯಸ್ಸಾದಂತೆ ಕಡಿಮೆಯಾಗುತ್ತೆ ನಿದ್ದೆ, ಅಚ್ಚರಿ ಹುಟ್ಟಿಸುವಂತಿದೆ ಇದರ ಹಿಂದಿನ ಕಾರಣ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾದಂತೆ ಕಡಿಮೆಯಾಗುತ್ತೆ ನಿದ್ದೆ, ಅಚ್ಚರಿ ಹುಟ್ಟಿಸುವಂತಿದೆ ಇದರ ಹಿಂದಿನ ಕಾರಣ!

ವಯಸ್ಸಾದಂತೆ ನಮ್ಮ ನಿದ್ದೆಯ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ. ವೃದ್ಧರು ಬೆಳಗ್ಗೆ ಬಹಳ ಬೇಗನೆ ಎದ್ದೇಳುತ್ತಾರೆ. ಕೆಲವೊಮ್ಮೆ ಅವರು ಇಡೀ ರಾತ್ರಿ ಮಲಗುವುದಿಲ್ಲ. ಅವರಿಗೆ ನಿದ್ರಾಹೀನತೆಯ ಸಮಸ್ಯೆ ಇರಬಹುದು ಎಂದು ನೀವು ಭಾವಿಸಬೇಡಿ. ಸಾಮಾನ್ಯವಾಗಿ ವಯಸ್ಸಾದವರಿಗೆಲ್ಲ ನಿದ್ರೆಯ ತೊಂದರೆ ಇರುತ್ತದೆ. ಅನೇಕ ಬಾರಿ ಅವರು ರಾತ್ರಿಯಲ್ಲಿ ಎಚ್ಚರಗೊಳ್ಳುತ್ತಾರೆ. ಮತ್ತೆ ಮಲಗಲು ಪ್ರಯತ್ನಿಸಿದರೂ ಅವರಿಗೆ ನಿದ್ದೆ ಬರುವುದಿಲ್ಲ.

ದುರ್ಬಲ ಪ್ರತಿಕ್ರಿಯೆ ಶಕ್ತಿ

ವಯಸ್ಸು ನಮ್ಮ ನಿದ್ರೆ ಮತ್ತು ಎಚ್ಚರದ ಅವಧಿಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮೆದುಳು ಸಮಯದೊಂದಿಗೆ ಹೆಚ್ಚು ಪ್ರತಿಕ್ರಿಯಿಸದ ಕಾರಣ ಇದು ಸಂಭವಿಸುತ್ತದೆ. ವಯಸ್ಸಾದಂತೆ ನಮ್ಮ ಮೆದುಳು ಸೂರ್ಯೋದಯ ಮತ್ತು ಸೂರ್ಯಾಸ್ತದಂತಹ ವಿಷಯಗಳಿಗೆ ಸರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಸಮಯದ ಅರಿವು

ವಯಸ್ಸಾದ ಮೇಲೆ ಸಮಯವನ್ನು ಸರಿಯಾಗಿ ಅನುಭವಿಸುವ ಶಕ್ತಿಯೂ ಕಡಿಮೆಯಾಗತೊಡಗುತ್ತದೆ. ಈ ಕಾರಣದಿಂದಾಗಿ ಹೆಚ್ಚು ಸುಸ್ತಾಗುತ್ತದೆ. ಎಷ್ಟೋ ಸಲ ಬೇಗ ನಿದ್ದೆಗೆ ಜಾರುತ್ತಾರೆ ಮತ್ತು ದೇಹದ ದಣಿವು ಮುಗಿದ ಮೇಲೆ ಎದ್ದೇಳುತ್ತಾರೆ. ಅನೇಕ ಸಂದರ್ಭಗಳಲ್ಲಿ  ರಾತ್ರಿಯಲ್ಲಿಯೂ ಎಚ್ಚರಗೊಳ್ಳುತ್ತಾರೆ.

ದುರ್ಬಲ ದೃಷ್ಟಿ

ವಯಸ್ಸು ಕಳೆದಂತೆ ದೃಷ್ಟಿಶಕ್ತಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಬೆಳಕನ್ನು ನೋಡಿದಾಗ ನಮ್ಮ ಮೆದುಳು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಬೆಳಕನ್ನು ಕಂಡಾಗ ಎದ್ದೇಳಲು ಹೇಳುತ್ತದೆಯಂತೆ. ಆದರೆ ದೃಷ್ಟಿ ದುರ್ಬಲವಾದಾಗ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ವೃದ್ಧರು ಬೇಗನೆ ಎದ್ದೇಳುತ್ತಾರೆ.  

ಪರಿಹಾರವೇನು?

ರಾತ್ರಿಯಿಡೀ ಆರಾಮವಾಗಿ ಮಲಗಲು ಬಯಸಿದರೆ, ಸೂರ್ಯ ಮುಳುಗುವ ಮೊದಲು ನೀವು ಪ್ರತಿದಿನ ಸಂಜೆ 30 ರಿಂದ 60 ನಿಮಿಷಗಳ ಕಾಲ ಬೆಳಕಿನಲ್ಲಿ ಇರಬೇಕು. ವಾಕ್ ಕೂಡ ಮಾಡಬಹುದು. ಹೊರಗೆ ಹೋಗಲು ಇಷ್ಟವಿಲ್ಲದಿದ್ದರೆ ಪ್ರಕಾಶಮಾನವಾದ ಪರದೆಯಲ್ಲಿ ಟಿವಿ ಅಥವಾ ಐಪ್ಯಾಡ್ ಅನ್ನು ವೀಕ್ಷಿಸಬಹುದು. ಪ್ರಖರವಾದ ಬೆಳಕಿನಿಂದಾಗಿ ಇನ್ನೂ ಸಂಜೆಯಾಗಿಲ್ಲವೆಂದು ಮನಸ್ಸಿಗೆ ಅನಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...