alex Certify ವಯಸ್ಸಾಗಂತೆ ತಡೆಯುತ್ತೆ ಔಷಧಿ; ಹಾರ್ವರ್ಡ್‌ ವಿಜ್ಞಾನಿಗಳ ಹೊಸ ಆವಿಷ್ಕಾರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಾಗಂತೆ ತಡೆಯುತ್ತೆ ಔಷಧಿ; ಹಾರ್ವರ್ಡ್‌ ವಿಜ್ಞಾನಿಗಳ ಹೊಸ ಆವಿಷ್ಕಾರ….!

ವಯಸ್ಸಾಗುವಿಕೆ ನೈಸರ್ಗಿಕ ಪ್ರಕ್ರಿಯೆ, ಅದನ್ನು ನಿಲ್ಲಿಸಲಾಗುವುದಿಲ್ಲ. ಆದರೆ ಕೆಲವು ಔಷಧಿಗಳ ಸಹಾಯದಿಂದ ವಯಸ್ಸಾಗುವ ಪ್ರಕ್ರಿಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೊಸ ಸಂಶೋಧನೆಯೊಂದರಲ್ಲಿ ಈ ಅಂಶ ಪತ್ತೆಯಾಗಿದೆ. ಹಾರ್ವರ್ಡ್ ವೈದ್ಯಕೀಯ ಸಂಸ್ಥೆಯಲ್ಲಿ ಈ ಬಗ್ಗೆ ಸಂಶೋಧನೆ ನಡೆದಿದೆ. ರಾಸಾಯನಿಕ ವಿಧಾನದ ಮೂಲಕ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡಬಹುದು ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ.

“ಕೆಮಿಕಲ್ ಇಂಡ್ಯೂಸ್ಡ್ ರಿಪ್ರೋಗ್ರಾಮಿಂಗ್ ಟು ರಿವರ್ಸ್ ಸೆಲ್ಯುಲಾರ್ ಏಜಿಂಗ್” ಎಂಬ ಶೀರ್ಷಿಕೆಯ ಅಧ್ಯಯನವನ್ನು ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ ಏಜಿಂಗ್‌ನಲ್ಲಿ ಪ್ರಕಟಿಸಲಾಗಿದೆ. ಹೆಸರಾಂತ ವಿಜ್ಞಾನಿ ಡಾ. ಡೇವಿಡ್ ಎ. ಸಿಂಕ್ಲೇರ್ ನೇತೃತ್ವದಲ್ಲಿ, ಜೇ-ಹ್ಯುನ್ ಯಾಂಗ್, ಕ್ರಿಸ್ಟೋಫರ್ ತಂಡ ಜೆನೆಟಿಕ್ ಮ್ಯಾನಿಪ್ಯುಲೇಷನ್ ಬದಲಿಗೆ ರಾಸಾಯನಿಕ ಹಸ್ತಕ್ಷೇಪವನ್ನು ಬಳಸಿಕೊಂಡು ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಯನ್ನು ಪರಿಶೋಧಿಸಿದೆ.

ವಿಶ್ವವಿದ್ಯಾನಿಲಯದ ಸಂಶೋಧಕರು ಅಂತಹ ರಾಸಾಯನಿಕ ಕಾಕ್ಟೈಲ್ ಅನ್ನು ಕಂಡುಹಿಡಿದಿದ್ದಾರೆ. ಇದು ವಯಸ್ಸನ್ನು  ಹಿಮ್ಮುಖ ಮಾಡಬಲ್ಲದು. ಈ ಮಾತ್ರೆಗೆ ಫೌಂಟೇನ್‌ ಆಫ್‌ ಯೂತ್‌ ಎಂದು ಹೆಸರಿಸಲಾಗಿದೆ. ಇಲಿ ಮತ್ತು ಮಂಗಗಳ ಮೇಲೆ ಸತತ 3 ವರ್ಷಗಳ ಕಾಲ ನಡೆಸಿದ ಸಂಶೋಧನೆ ಕೊನೆಗೂ ಯಶಸ್ವಿಯಾಗಿದೆ. ಸಂಶೋಧಕರು ಸೆಲ್ಯುಲಾರ್ ವಯಸ್ಸನ್ನು ಹಿಮ್ಮೆಟ್ಟಿಸುವ ಅಣುಗಳನ್ನು ಕಂಡುಹಿಡಿದರು. ತಂಡವು ಆರು ರಾಸಾಯನಿಕ ಕಾಕ್ಟೇಲ್ಗಳನ್ನು ಕಂಡುಹಿಡಿದಿದೆ.

ಅದು NCC ಮತ್ತು ಜೀನೋಮ್-ವೈಡ್ ಟ್ರಾನ್ಸ್‌ಸ್ಕ್ರಿಪ್ಟ್‌ ಪ್ರೊಫೈಲ್ಗಳನ್ನು ಪುನಃಸ್ಥಾಪಿಸುತ್ತದೆ. ಇದರಿಂದಾಗಿ ಯೌವನದ ಪೂರ್ಣ ಸ್ಥಿತಿಯು ಹಾಗೇ ಉಳಿಯುತ್ತದೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಮಾನವರಲ್ಲಿ ವಯಸ್ಸನ್ನು ಹಿಮ್ಮೆಟ್ಟಿಸಲು ಪ್ರಾರಂಭಿಸುತ್ತದೆ. ನರ, ಮೆದುಳಿನ ಅಂಗಾಂಶ, ಮೂತ್ರಪಿಂಡ ಮತ್ತು ಸ್ನಾಯುಗಳ ಮೇಲೆ ನಡೆಸಿದ ಸಂಶೋಧನೆಯ ಫಲಿತಾಂಶಗಳು ತುಂಬಾ ಚೆನ್ನಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿ ವಯಸ್ಸಾದ ಲಕ್ಷಣಗಳನ್ನು ರಾಸಾಯನಿಕಗಳಿಂದ ಕಡಿಮೆ ಮಾಡಬಹುದು,  ಆದರೆ ಕೆಲವು ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳಿದ್ದರೆ ಇದನ್ನು ಬಳಸುವಂತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...