ಈ ಕೋಟೆ ಯಾವ ಕಾಲದಲ್ಲಿ ನಿರ್ಮಾಣವಾಯಿತು ಅನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆದರೂ 2000 ವರ್ಷಗಳ ಇತಿಹಾಸ ಹೊಂದಿರಬಹುದು ಎಂದು ನಂಬಲಾಗಿದೆ. ಶ್ರೀರಾಮ ರಾವಣನನ್ನು ಸೋಲಿಸಿದ ನಂತರ ಇದನ್ನು ನಿರ್ಮಿಸಿ, ತಮ್ಮ ಲಕ್ಷ್ಮಣನಿಗೆ ಕೋಟೆಯಿಂದಲೇ ಲಂಕಾವನ್ನು ನೋಡಿಕೊಳ್ಳುವಂತೆ ಹೇಳಿದ ಎಂದು ಪುರಾಣದ ಕಥೆಯೊಂದು ಹೇಳುತ್ತದೆ. ಆ ಕಾರಣಕ್ಕಾಗಿಯೇ ಈ ಕೋಟೆಗೆ ಬ್ರದರ್ಸ್ ಫೋರ್ಟ್ ಎಂಬ ಹೆಸರು ಬಂದಿದೆ.
ಬಂಧ್ವಾಗಢ್ ಹಿಲ್
ಬಂಧ್ವಾಗಢ್ ಕೋಟೆಯ ಹತ್ತಿರದಲ್ಲಿದ್ದು, ಇದು ಸಮುದ್ರ ಮಟ್ಟದಿಂದ 807 ಮೀಟರ್ ಎತ್ತರದಲ್ಲಿದೆ. ಬೆಟ್ಟದ ಸುತ್ತಲೂ ಇಳಿಜಾರಾದ ಕಣಿವೆಗಳಿವೆ. ಜೌಗು ಹುಲ್ಲುಗಾವಲುಗಳಿದ್ದು, ಇದನ್ನು ಸ್ಥಳೀಯವಾಗಿ ಬೋಹೆರಾ ಎಂದು ಕರೆಯುತ್ತಾರೆ. ಸಣ್ಣ ಬೆಟ್ಟದ ಸುತ್ತಲೂ 32 ಸಣ್ಣ ಸಣ್ಣ ದಿಣ್ಣೆಗಳಿವೆ. ಇವುಗಳು ಹಲವು ಕಣಿವೆಗಳನ್ನು ರೂಪಿಸಿವೆ.
ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನ
ಬಂಧ್ವಾಗಢ್ ಪ್ರಮುಖ ಆಕರ್ಷಣೆ ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನ. 450 ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿ ಪ್ರದೇಶ ಹೊಂದಿದ್ದು, ಫ್ಲೋರಾ ಮತ್ತು ಫೌನಾ ಜಾತಿಗೆ ಸೇರಿದ ಸಸ್ಯ ವರ್ಗವನ್ನು ಇಲ್ಲಿ ಕಾಣಬಹುದು. ಈ ಉದ್ಯಾನ, ಬೆಟ್ಟ ಪ್ರದೇಶಗಳನ್ನು ಒಳಗೊಂಡಿದೆ. ಮರಳುಗಲ್ಲು, ಬಂಡೆಕಲ್ಲು, ಜೌಗು ಭೂಮಿ, ದಟ್ಟ ಅರಣ್ಯ, ಹುಲ್ಲುಗಾವಲುಗಳಿಂದ ಆವೃತವಾಗಿದೆ. ಬಂಧ್ವಾಗಢ್ ವನ್ಯಜೀವಿಗಳ ಅಭಯಾರಣ್ಯದಲ್ಲಿ ಎಲಿಫೆಂಟ್ ಸಫಾರಿ ಕೈಗೊಳ್ಳುವುದು ಇಲ್ಲಿನ ಮತ್ತೊಂದು ಆಕರ್ಷಣೆ. ಸಫಾರಿ ಮಾಡುವುದರ ಮೂಲಕ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಆಸ್ವಾದಿಸಬಹುದು.