alex Certify ವಧು-ವರ ಕತ್ತರಿಸಬೇಕಿದ್ದ ಕೇಕ್ ಹಾಳುಮಾಡಿದ ಭೂಪ; ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 42 ಮಿಲಿಯನ್ ಮಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧು-ವರ ಕತ್ತರಿಸಬೇಕಿದ್ದ ಕೇಕ್ ಹಾಳುಮಾಡಿದ ಭೂಪ; ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 42 ಮಿಲಿಯನ್ ಮಂದಿ..!

ಮದುವೆ ಸಮಾರಂಭದ ಹಲವಾರು ವೈರಲ್ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಅದರಲ್ಲೂ ಪಾಶ್ಚಿಮಾತ್ಯರ ಮದುವೆಯಲ್ಲಿ ಕೇಕ್ ಇರಲೇಬೇಕು. ಈ ಕೇಕ್ ಕತ್ತರಿಸೋ ವೇಳೆ ಆಗುವ ಅವಾಂತರಗಳ ವಿಡಿಯೋಗಳನ್ನು ಬಹುಶಃ ನೀವು ನೋಡಿರಬಹುದು.

ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ವಧು-ವರ ಕತ್ತರಿಸಬೇಕಾದ ಕೇಕ್ ಅನ್ನು ವ್ಯಕ್ತಿಯೊಬ್ಬ (ಸ್ನೇಹಿತ ಅಥವಾ ಸಂಬಂಧಿ ಆಗಿರಬಹುದು) ಹಾಳು ಮಾಡಿದ್ದಾನೆ. ಇದರಿಂದ ಸಂತೋಷದಿಂದ ಇರಬೇಕಿದ್ದ ಮದುವೆ ಮನೆಯಲ್ಲಿ ವರನಿಗೆ ಅತೀವ ಕೋಪವನ್ನುಂಟುಮಾಡಿದೆ. ವಧು-ವರ ಇಬ್ಬರ ಮುಖದಲ್ಲೂ ಕೋಪದ ಛಾಯೆ ಮೂಡಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಇದು 42 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ವಧು ಬಿಳಿ ಬಣ್ಣದ ಮದುವೆಯ ಗೌನ್ ಮತ್ತು ವರ ಟಕ್ಸೆಡೊ ಉಡುಪು ಧರಿಸಿದ್ದು, ಆಕರ್ಷಕವಾಗಿ ಕಾಣುತ್ತಿದ್ದಾರೆ. ವಿವಾಹದ ಸಂಭ್ರಮದ ಕ್ಷಣದಲ್ಲಿ ಇವರು ಕೇಕ್ ಅನ್ನು ಕತ್ತರಿಸಿದ್ದಾರೆ. ಈ ವೇಳೆ ವೇದಿಕೆಗೆ ಇದ್ದಕ್ಕಿದ್ದಂತೆ ಬಂದ ವ್ಯಕ್ತಿಯೊಬ್ಬ ಕೇಕ್ ಅನ್ನು ತುಂಡುಗಳನ್ನಾಗಿ ಎತ್ತಿ ಇಬ್ಬರ ಮುಖಕ್ಕೂ ವಧು-ವರನ ಮುಖಕ್ಕೆ ಮೆತ್ತಿದ್ದಾನೆ. ಕೇಕ್ ಅನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾನೆ. ಇದರಿಂದ ನವಜೋಡಿ ಸಿಟ್ಟಿಗೆದ್ದಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಆ ವ್ಯಕ್ತಿಯ ವರ್ತನೆ ಸಿಟ್ಟಾಗಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ನಂತರ ಏನಾಯಿತು ಎಂದು ತಿಳಿಯಲು ಬಯಸಿದ್ದಾರೆ. ಕೆಲವು ಬಳಕೆದಾರರು ಬಹುಶಃ ವರ ಆತನಿಗೆ ಕಪಾಳಮೋಕ್ಷ ಮಾಡಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
En gåde, der vil forvirre alle: Find det falske tal. Hvorfor ikke alle konservesglas skal vendes på hovedet: En Find pigen på billedet Hvorfor lugter vasketøj Hvor er de 3 forskelle mellem billederne: Hvordan optimere effekten af vaskemidler: Spar tid og