ಸೋಶಿಯಲ್ ಮೀಡಿಯಾಗಳಲ್ಲಿ ಮದುವೆ ಸಂಬಂಧಿಸಿದ ಸಾಕಷ್ಟು ಫನ್ನಿ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ಸೇರಿದ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡ್ತಿದೆ.
ಈ ವಿಡಿಯೋದಲ್ಲಿ ವರನು ವಧುವಿಗೆ ಹೂವಿನ ಹಾರ ಹಾಕುವುದನ್ನು ಬಿಟ್ಟು ವಧುವಿನ ಸಹೋದರಿ ಕುತ್ತಿಗೆಗೆ ಹಾರ ಹಾಕಿದ್ದಾನೆ.
ಕಲ್ಯಾಣ ಮಂಟಪದಲ್ಲಿ ವಧು ಹಾಗೂ ವರ ನಿಂತಿರುತ್ತಾರೆ. ಜೊತೆಯಲ್ಲಿ ಎರಡೂ ಮನೆಯ ಕುಟುಂಬಸ್ಥರು ಸಹ ಇದ್ದಿರುತ್ತಾರೆ. ವರ ಮದ್ಯಪಾನ ಮಾಡಿದ್ದರಿಂದಲೋ ಏನೋ ನಿಂತುಕೊಳ್ಳಲು ಸಹ ಹೆಣಗಾಡುತ್ತಿರುತ್ತಾನೆ. ಆತನ ಸಹೋದರ ಆತನನ್ನು ಹಿಡಿದುಕೊಂಡು ನಿಂತಿರುತ್ತಾನೆ. ವಧುವಿನ ಪಕ್ಕದಲ್ಲಿ ನಿಂತಿದ್ದ ಸಹೋದರಿ ಹೂವಿನ ಹಾರವನ್ನು ಹಿಡಿದುಕೊಂಡಿರುತ್ತಾಳೆ.
ಗೊಂದಲಕ್ಕೆ ಒಳಗಾದ ವರ, ವಧುವಿನ ಬದಲು ಆಕೆಯ ಸಹೋದರಿಯ ಕುತ್ತಿಗೆಗೆ ಹಾರ ಹಾಕಿದ್ದಾನೆ. ಇದನ್ನು ನೋಡಿದ ವಧುವಿನ ಕುಟುಂಬಸ್ಥರು ಶಾಕ್ ಆಗಿದ್ದಾರೆ.
ವಧು ಇದ್ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ ವರ ಮಾತ್ರ ಯಾವುದೇ ರೀತಿಯಲ್ಲಿ ಉತ್ತರ ಕೊಡುವ ಸ್ಥಿತಿಯಲ್ಲಿ ಇರೋದಿಲ್ಲ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.