ಮದುವೆ ಮನೆಗಳಲ್ಲಿ ನಡೆಯೋ ತಮಾಷೆಯ ಘಟನೆಗಳ ವಿಡಿಯೋ ಆಗಾಗ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಮತ್ತೊಂದು ಫನ್ನಿ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ವರ ಕಂಠಪೂರ್ತಿ ಕುಡಿದು ಬಂದು ವಧುವಿನ ಬದಲು ಅತ್ತೆಗೆ ವರಮಾಲೆ ಹಾಕಿದ್ರೆ ಹೇಗಿರತ್ತೆ ಹೇಳಿ ? ಅಂಥದ್ದೇ ಘಟನೆ ಇಲ್ಲಿ ನಡೆದಿದೆ.
ಮದುವೆ ಖುಷಿಯಲ್ಲೋ ಏನೋ ವರ ಸಿಕ್ಕಾಪಟ್ಟೆ ಕುಡಿದಿದ್ದ. ಮದ್ಯದ ಅಮಲಿನಲ್ಲಿದ್ದ ಅವನಿಗೆ ಸುತ್ತ ಏನಾಗ್ತಿದೆ ಅನ್ನೋದೇ ಗೊತ್ತಿರಲಿಲ್ಲ. ವೇದಿಕೆ ಏರಿದ ಭೂಪ ವಧುವಿಗೆ ವರಮಾಲೆ ತೊಡಿಸುವ ಬದಲು ಅತ್ತೆಗೆ ಹಾಕಲು ಹೋಗಿದ್ದಾನೆ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ಅವನನ್ನು ತಡೆದಿದ್ದಾರೆ.
ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ. ವಧುವಿಗೆ ಹಾರ ಹಾಕುವಂತೆ ಅಕ್ಕಪಕ್ಕದಲ್ಲಿದ್ದ ಸಂಬಂಧಿಕರು ವರನಿಗೆ ಸೂಚಿಸ್ತಾರೆ. ತಲೆ ಅಲ್ಲಾಡಿಸಿದ ಭೂಪ ಕಷ್ಟಪಟ್ಟು ವಧುವಿನ ಕೊರಳಿಗೆ ಹಾರ ಹಾಕಲು ಯತ್ನಿಸಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆದ್ರೆ ಮದ್ಯದ ಅಮಲಿನಲ್ಲಿದ್ದ ಆತ ವಧುವಿಗೆ ಮಾಲೆ ಹಾಕುವ ಮುನ್ನವೇ ಸೋಫಾ ಮೇಲೆ ಬಿದ್ದಿದ್ದಾನೆ. ಇದನ್ನು ನೋಡಿದ ವಧು ಕಂಗಾಲಾಗಿ ಹೋಗಿದ್ದಾಳೆ.