ವಧು ಪರೀಕ್ಷೆಗೆ ಹೋದಾಗ ಆಕೆಯ ನಡಿಗೆಯನ್ನು ಗಮನಿಸ್ತಾರೆ ವರನ ಕಡೆಯವರು. ನಡಿಗೆಯಿಂದಲೇ ಮಹಿಳೆಯರ ಗುಣ ಅಳೆಯಬಹುದು.
ಮನೆಗೆ ಬರುವ ಲಕ್ಷ್ಮಿ ಭಾಗ್ಯ ತರುತ್ತಾಳಾ? ಆಕೆಯನ್ನು ಮದುವೆ ಮಾಡಿಸಿಕೊಂಡು ಬಂದ್ರೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತ ಎಂಬುದೆಲ್ಲ ನಡಿಗೆಯಿಂದ ತಿಳಿಯುತ್ತೆ. ಸನಾತನ ಧರ್ಮದ ಬ್ರಹ್ಮ ಪುರಾಣ ಇದರ ಬಗ್ಗೆ ವಿವರವಾಗಿ ಹೇಳಿದೆ.
ಹಸುವಿನ ಹಾಗೆ ನಡೆಯುವ ಮಹಿಳೆಯರು ಸಾಕ್ಷಾತ್ ಲಕ್ಷ್ಮೀ ರೂಪದವರಂತೆ. ಹಂಸ ಅಥವಾ ಆನೆಯಂತೆ ನಡೆಯುವ ಮಹಿಳೆಯರು ಉತ್ತಮವಂತೆ. ಅವರು ಯಾವ ಮನೆಗೆ ಪ್ರವೇಶ ಮಾಡ್ತಾರೋ ಆ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳಂತೆ.
ಭೂಮಿಗೆ ಕಾಲನ್ನು ಅಪ್ಪಳಿಸುತ್ತ ನಡೆಯುವ ಮಹಿಳೆಯರಿಂದ ಹುಟ್ಟಿದ ಮನೆಯವರು ಹಾಗೂ ಕೊಟ್ಟ ಮನೆಯವರು ದುಃಖ ಅನುಭವಿಸುತ್ತಾರೆಂದು ಶಾಸ್ತ್ರ ಹೇಳುತ್ತದೆ. ಹಿಮ್ಮಡಿಯ ಗಂಟನ್ನು ಎತ್ತಿ ನಡೆಯುವ ಮಹಿಳೆಯರ ಭವಿಷ್ಯ ಅಂಧಕಾರದಲ್ಲಿರುತ್ತದೆಯಂತೆ.
ಜಿಂಕೆಯಂತ ಕಣ್ಣಿರುವವರು ಬಹಳ ಸುಂದರವಾಗಿರುತ್ತಾರೆ. ಜೊತೆಗೆ ಉಚ್ಛ ಸ್ಥಾನದಲ್ಲಿರುತ್ತಾರೆ. ಆದ್ರೆ ಜಿಂಕೆಯಂತ ನಡಿಗೆಯುಳ್ಳವರು ಎಂದೂ ಸ್ವಾತಂತ್ರರಾಗಲು ಸಾಧ್ಯವಿಲ್ಲ.
ಯಾವ ಮಹಿಳೆಯ ಪಾದಗಳು ಸುಂದರ ಹಾಗೂ ಕೆಂಪು ಬಣ್ಣದಲ್ಲಿರುತ್ತದೆಯೋ ಅಂತ ಮಹಿಳೆ ಮಹಾರಾಣಿ ತರ ಜೀವಿಸುತ್ತಾಳೆಂದು ಪುರಾಣ ಹೇಳಿದೆ. ಕಾಲಿನ ಬೆರಳುಗಳು ಸಣ್ಣ ಹಾಗೂ ದೂರ ದೂರ ಇರುವ ಮಹಿಳೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಾಳಂತೆ.