ನವದೆಹಲಿ: ಮದುವೆಯನ್ನು ಎಲ್ಲರಿಗಿಂತಲೂ ಭಿನ್ನವಾಗಿ ಮಾಡಬೇಕು ಎಂದು ಹವಣಿಸುವ ಹಲವಾರು ಕುಟುಂಬಗಳಿವೆ. ತಮ್ಮ ಯೋಗ್ಯತೆ, ಶ್ರೀಮಂತಿಕೆಗೆ ತಕ್ಕಂತೆ ಇದು ಬದಲಾಗುತ್ತದೆ. ಮದುವೆಯ ದಿನ ಅದ್ಧೂರಿ ಎಂಟ್ರಿ ಕೊಡಲು ಹೆಲಿಕಾಪ್ಟರ್‌ನಲ್ಲಿ ಬರುವುದು ಇತ್ತೀಚೆಗೆ ಟ್ರೆಂಡ್ ಆಗಿಬಿಟ್ಟಿದೆ.
ಇಂಥದ್ದೇ ಒಂದು ಎಂಟ್ರಿ ಕೊಡಲು ಹೋದ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾಗಿ ಸುಟ್ಟು ಭಸ್ಮವಾಗಿದೆ. ದೆಹಲಿಯಲ್ಲಿ ನಡೆದ ಈ ಘಟನೆಯಲ್ಲಿ ವಧು ಬೆಂಕಿಗೆ ಆಹುತಿಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ ವಧುವಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿರುವ ಪರಿ ನೋಡಿದರೆ ಅದರಲ್ಲಿ ಇರುವವರು ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ, ಪೈಲೆಟ್ ಮತ್ತು ವಧು ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಸಲಿಗೆ ಅದೃಷ್ಟವಶಾತ್ ಇಬ್ಬರಿಗೂ ಯಾವುದೇ ಹಾನಿಯಾಗಿಲ್ಲ.ಮದುವೆ ನಿಗದಿಯಂತೆ ನಡೆದಿದೆ ಎಂದು ವರದಿಯಾಗಿದೆ.
ಈ ವಿಡಿಯೋವನ್ನು ಹಂಚಿಕೊಂಡಿದ್ದ ಟ್ವಿಟ್ಟರ್ ಬಳಕೆದಾರರೊಬ್ಬರು, “ವಧು ಐಷಾರಾಮಿ ಮದುವೆಯ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯಬೇಕು ಎಂದುಕೊಂಡರೆ, ಎಲ್ಲಾ ಕನಸುಗಳು ಕ್ಷಣದಲ್ಲಿ ಮಾಯವಾಗುತ್ತವೆ. ಪಾಲಕರು ಈ ಸಾವನ್ನು ಅಸಹಾಯಕರಾಗಿ ನೋಡುತ್ತಾರೆ. ಇಂಥ ಐಷಾರಾಮಿ ಮದುವೆಗೆ ಕಡಿವಾಣ ಹಾಕಿ’ ಎಂದು ಬರೆಯಲಾಗಿದ್ದು, ಇದು ಭಾರಿ ವೈರಲ್ ಆಗಿತ್ತು. ಆದರೆ ಘಟನೆಯಲ್ಲಿ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದು ಇಂಡಿಯಾ ಟುಡೇ ಪತ್ರಿಕೆ ವರದಿ ಮಾಡಿದೆ.
https://twitter.com/Estadao/status/992907493520171008?ref_src=twsrc%5Etfw%7Ctwcamp%5Etweetembed%7Ctwterm%5E992907493520171008%7Ctwgr%5Eca1e21fd5515b9ceebd86d9552f1cabd177f16f0%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-this-horrific-helicopter-crash-did-not-kill-couple-wedding-went-ahead-as-planned-2345247-2023-03-11