ಲ್ಯಾಪ್ ಟಾಪ್ ಹ್ಯಾಂಗ್ ಆಗ್ತಿದೆಯಾ…? ಇಲ್ಲಿದೆ ಪರಿಹಾರ 30-03-2023 9:26AM IST / No Comments / Posted In: Latest News, Live News, Special, Life Style ಮನೆಯಲ್ಲಿ ಕೆಲಸ ಮಾಡುವವರಿಗೆ ಕಂಪ್ಯೂಟರ್ ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡುತ್ತೆ. ಇದಕ್ಕೆ ನಿಮ್ಮ ಬಳಿಯೇ ಪರಿಹಾರವಿದೆ. ಸಾಮಾನ್ಯವಾಗಿ ಅನೇಕರು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಬಂದ್ ಮಾಡುವುದಿಲ್ಲ. ವಿಂಡೋಸ್ 10 ತಾನಾಗಿಯೇ ಸ್ಲೀಪ್ ಮೋಡ್ ಗೆ ಹೋಗುತ್ತದೆ. ಆದ್ರೆ ಬಂದ್ ಮಾಡದ ಕಾರಣ ಚಾಲನೆಯಲ್ಲಿರುತ್ತದೆ. ಇದ್ರಿಂದ ಕಂಪ್ಯೂಟರ್ ನಿಧಾನವಾಗುವುದು, ಹ್ಯಾಂಗ್ ಆಗುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಆಗಾಗ ನಿಮ್ಮ ಕಂಪ್ಯೂಟರ್,ಲ್ಯಾಪ್ ಟಾಪನ್ನು ರಿಸ್ಟಾರ್ಟ್ ಮಾಡ್ತಿರಿ. ಯಾವುದೇ ಆಪರೇಟಿಂಗ್ ಸಿಸ್ಟಂನಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಹಾಗಾಗಿಯೇ ಕಂಪನಿಗಳು ನವೀಕರಣ ಆಯ್ಕೆ ನೀಡುತ್ತವೆ. ನೀವು ನವೀಕರಣ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಸಿಸ್ಟಂ ನವೀಕರಣಗೊಂಡು ಸಮಸ್ಯೆ ಕಡಿಮೆಯಾಗುತ್ತದೆ. ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಲ್ಲಿ ಅನೇಕ ಬಳಕೆಯಾಗದ ಅಪ್ಲಿಕೇಷನ್ ಗಳಿರುತ್ತವೆ. ಈ ಅಪ್ಲಿಕೇಷನ್ ಗಳು ಕಂಪ್ಯೂಟರ್ ಹ್ಯಾಂಗ್ ಆಗಲು ಕಾರಣವಾಗುತ್ತದೆ. ಹಾಗಾಗಿ ಆ ಅಪ್ಲಿಕೇಷನ್ ಗಳನ್ನು ನೀವು ಡಿಲೀಟ್ ಮಾಡಿ. ರ್ಯಾಮ್ ಹೆಚ್ಚಿಸುವುದ್ರಿಂದ ಲ್ಯಾಪ್ ಟಾಪ್ ವೇಗ ಹೆಚ್ಚಾಗುತ್ತದೆ. 50 ಸಾವಿರ ಮೌಲ್ಯದ ಲ್ಯಾಪ್ ಟಾಪ್ ಗಳಿಗೆ 4 ಜಿಬಿ ರ್ಯಾಮ್ ನೀಡಲಾಗುತ್ತದೆ. ಈ ರ್ಯಾಮ್ ಸಾಕಾಗುವುದಿಲ್ಲ. ಹಾಗಾಗಿ ರ್ಯಾಮ್ ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿದೆ. ಸಾಲಿಡ್ ಸ್ಟೇಟ್ ಡ್ರೈವ್ಸ್. ಹೊಸ ರೀತಿಯ ಶೇಖರಣಾ ಸಾಧನವಾಗಿದ್ದು, ಇದು ಫ್ಲ್ಯಾಷ್ ಮೆಮೊರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಎಸ್‌ಎಸ್‌ಡಿ ಯಲ್ಲಿ ಬಳಸಲಾಗುವ ಫ್ಲ್ಯಾಷ್ ಮೆಮೊರಿ ತಂತ್ರಜ್ಞಾನದ ಮೂಲಕ ಈಗಾಗಲೇ ಚಾಲನೆಯಲ್ಲಿರುವ ಎಚ್‌ಡಿಡಿಗಿಂತ ಕಡಿಮೆ ಸಮಯದಲ್ಲಿ ಡೇಟಾವನ್ನು ಪ್ರವೇಶಿಸಬಹುದು. ಎಸ್‌ಎಸ್‌ಡಿಯ ಬೆಲೆ ಎಚ್‌ಡಿಡಿಗಿಂತ ಹೆಚ್ಚಿರುತ್ತದೆ.