
ಪಕ್ಷದ ಯುವ ಮುಖಂಡನೂ ಆಗಿರುವ ಎಎಪಿ ಸಂಸದ ಚಡ್ಡಾ, ಲ್ಯಾಕ್ಮೆ ಫ್ಯಾಷನ್ ವೀಕ್ನಲ್ಲಿ ರ್ಯಾಂಪ್ ವಾಕ್ ಮಾಡಿದ್ದು, ಎಲ್ಲರನ್ನೂ ಮೂಕ ವಿಸ್ಮಿತಗೊಳಿಸಿದ್ದಾರೆ. ಇದೀಗ ರ್ಯಾಂಪ್ ವಾಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
33 ವರ್ಷದ ಚಡ್ಡಾ ಅವರು ಮೆಗಾ ಫ್ಯಾಶನ್ ಈವೆಂಟ್ನಲ್ಲಿ ಡಿಸೈನರ್ ಪವನ್ ಸಚ್ದೇವ್ಗೆ ಶೋಸ್ಟಾಪರ್ ಆಗಿದ್ದರು. ನಟ ಅಪರಶಕ್ತಿ ಖುರಾನಾ ಅವರೊಂದಿಗೆ ರ್ಯಾಂಪ್ ವಾಕ್ ಮಾಡಿದ್ದಾರೆ. ಬರ್ಗಂಡಿ ಹೈ-ನೆಕ್ನ ಮೇಲೆ ಕಪ್ಪು ಬಣ್ಣದ ಜಾಕೆಟ್ ಮತ್ತು ಪ್ಯಾಂಟ್ ಧರಿಸಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಚಡ್ಡಾ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು.
ಚಡ್ಡಾ ರ್ಯಾಂಪ್ ವಾಕ್ ಮಾಡುತ್ತಿರುವುದನ್ನು ನೋಡಿದ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಆಪ್ ಬಹು ಪ್ರತಿಭಾವಂತ ಸಂಸದರನ್ನು ಹೊಂದಿದೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.